ವಿಶ್ವ ಬ್ಯಾಂಕಿನ ವ್ಯಾಪಾರ ಸೂಚ್ಯಂಕದಲ್ಲಿ ಭಾರತಕ್ಕೆ 130ನೇ ಸ್ಥಾನ

Published On :
ವಾಷಿಂಗ್ಟನ್: ವ್ಯಾಪಾರ, ವಹಿವಾಟಿನಲ್ಲಿ ಭಾರತ ವಿಶ್ವದಲ್ಲಿ 130ನೇ ಸ್ಥಾನದಲ್ಲಿದೆ. ವಿಶ್ವ ಬ್ಯಾಂಕಿನ ಇತ್ತೀಚಿನ ಡೂಯಿಂಗ್ ಬಿಸ್ ನೆಸ್ ವರದಿ ಪ್ರಕಾರ, ಅನೇಕ ನಿಯತಾಂಕಗಳ ಪ್ರಕಾರ ಮೌಲ್ಯಮಾಪನ ಮಾಡಿದ್ದರಲ್ಲಿ 190 ದೇಶಗಳಲ್ಲಿ ಕಳೆದ ವರ್ಷದಂತೆ ಈ ವರ್ಷ ಕೂಡ ಭಾರತ 130ನೇ ಸ್ಥಾನದಲ್ಲಿದೆ. ರ್ಯಾಂಕಿಂಗ್ ನಲ್ಲಿ ಭಾರತ ಒಂದು ಸ್ಥಾನ ಮೇಲೇರಿ 131ನೇ ಸ್ಥಾನದಲ್ಲಿದೆ.
ಕೇಂದ್ರ ಸರ್ಕಾರ, ಭಾರತದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಇರುವ ಮಾರ್ಗಸೂಚಿ, ನಿಯಮಗಳನ್ನು ಇನ್ನಷ್ಟು ಸರಳಗೊಳಿಸಲು ಪ್ರಯತ್ನಿಸುತ್ತಿದ್ದು ಟಾಪ್ 50 ದೇಶಗಳ ಸ್ಥಾನದಲ್ಲಿ ತರಲು ಪ್ರಯತ್ನ ನಡೆಸುತ್ತಿದೆ.
ವಿಶ್ವ ಬ್ಯಾಂಕಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕಳೆದ ವರ್ಷಕ್ಕಿಂತ ಬದಲಾವಣೆಯಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಸರ್ಕಾರ ತೆಗೆದುಕೊಂಡಿರುವ 12 ಪ್ರಮುಖ ಸುಧಾರಿತ ಕ್ರಮಗಳನ್ನು ವರದಿಯಲ್ಲಿ ಪರಿಗಣಿಸಿಲ್ಲ ಎಂದು ಹೇಳಿದೆ.
Doing Buisness 2017 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನ್ಯೂಜಿಲ್ಯಾಂಡ್, ಎರಡನೇ ಸ್ಥಾನದಲ್ಲಿ ಸಿಂಗಾಪೂರ್ ಇದೆ. ಆ ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್, ಹಾಂಗ್ ಕಾಂಗ್, ದಕ್ಷಿಣ ಕೊರಿಯಾ, ನಾರ್ವೆ, ಇಂಗ್ಲೆಂಡ್, ಅಮೆರಿಕಾ, ಸ್ವೀಡನ್, ಯುಗೊಸ್ಲಾವ್, ರಿಪಬ್ಲಿಕ್ ಆಫ್ ಮಸಿಡೊನಿಯಾ ಇವೆ. ನೆರೆಯ ಪಾಕಿಸ್ತಾನ 144ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


