ಧನ್ ಧನಾ ಧನ್ ಶೀಘ್ರ ಅಂತ್ಯ: ಗ್ರಾಹಕರಿಗೆ ಹೊಸ ಆಫರ್ ಘೋಷಿಸಿದ ಜಿಯೋ

ರಿಲಯನ್ಸ್ ಜಿಯೋದ ಧನ್ ಧನಾ ಧನ್ ಆಫರ್ ಗಳೆಲ್ಲವೂ ಈ ತಿಂಗಳಲ್ಲಿ ಕೊನೆಗೊಳ್ಳಲಿದ್ದು ಗ್ರಾಹಕರಿಗಾಗಿ ಜಿಯೋ ನೂತನ ಆಫರ್ ಗಳನ್ನು ಪ್ರಕಟಿಸಿದೆ...
ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ
Updated on: 
ಮುಂಬೈ: ರಿಲಯನ್ಸ್ ಜಿಯೋದ ಧನ್ ಧನಾ ಧನ್ ಆಫರ್ ಗಳೆಲ್ಲವೂ ಈ ತಿಂಗಳಲ್ಲಿ ಕೊನೆಗೊಳ್ಳಲಿದ್ದು ಗ್ರಾಹಕರಿಗಾಗಿ ಜಿಯೋ ನೂತನ ಆಫರ್ ಗಳನ್ನು ಪ್ರಕಟಿಸಿದೆ. 
ಪ್ರೈಮ್ ಮೆಂಬರ್ ಆಗಿರುವ ಗ್ರಾಹಕರು ಈ ಹಿಂದೆ 309 ರುಪಾಯಿ ರಿಚಾರ್ಜ್ ಮಾಡಿದರೆ ಅಂತಹ ಗ್ರಾಹಕರು 84 ಜಿಬಿ ಡಾಟಾ 84 ದಿನಗಳು ಬಳಸಬಹುದಿತ್ತು. ಇದೀಗ ಅಂತಹ ಆಫರ್ ಕಡಿತಗೊಳಿಸಿರುವ ಜಿಯೋ ಸಂಸ್ಧೆ 309ಕ್ಕೆ 54 ಜಿಬಿ ಡಾಟಾ 54 ದಿನಗಳ ಪ್ಲಾನ್ ನೀಡಿದೆ. 
ಇನ್ನು 349 ಮತ್ತು 399 ರುಪಾಯಿಗಳ ಎರಡೂ ನೂತನ ಆಫರ್ ಗಳನ್ನು ಜಿಯೋ ಪ್ರಕಟಿಸಿದೆ. ಅಂತೆ 349 ರುಪಾಯಿ ರಿಜಾರ್ಜ್ ಮಾಡಿದರೆ 20 ಜಿಬಿ ಡಾಟಾ 54 ದಿನಕ್ಕೆ ಮತ್ತು 399 ರು. ಪ್ಯಾಕ್ ರಿಜಾರ್ಜ್ ಮಾಡಿದರೆ 84 ಜಿಬಿ ಡಾಟಾ 84 ದಿನ, ಅಂದರೆ ಗ್ರಾಹಕರು ಪ್ರತಿ ದಿನ 1 ಜಿಬಿ ಡಾಟಾವನ್ನು ಬಳಸಬಹುದು. 
ಇನ್ನು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಜಿಯೋ ಸಂಸ್ಧೆ 399 ರುಪಾಯಿಗಳ ಪ್ಯಾನ್ ಘೋಷಿಸಿದ್ದು 90 ದಿನಕ್ಕೆ 90 ಜಿಬಿ ಡಾಟಾ ಆಫರ್ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com