

ಮುಂಬೈ: ಸೋಮವಾರವೂ ಭಾರತೀಯ ಷೇರುಮಾರುಕಟ್ಟೆ ಏರಿಕೆಯತ್ತ ಮುಖಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 135 ಅಂಕಗಳ ಏರಿಕೆ ಕಂಡಿದೆ.
135 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 30,324.90 ಅಂಕಗಳಿಗೆ ಏರಿಕೆಯಾಗಿದ್ದು, ನಿಫ್ಟಿ ಕೂಡ 42.10 ಅಂಕಗಳ ಏರಿಕೆಯೊಂದಿಗೆ 9,442 ಅಂಕಗಳಿಗೆ ಏರಿಕೆಯಾಗಿದೆ. ದಿನದ ಆರಂಭದಲ್ಲೇ 156 ಸೆನ್ಸೆಕ್ಸ್ 156 ಅಂಕಗಳ ಏರಿಕೆ ಕಂಡಿತ್ತಾದರೂ ಬಳಿಕ 21 ಅಂಕಗಳ ಕುಸಿತ ಕಂಡಿತ್ತು. ಕಳೆದ ವಾರಾಂತ್ಯದಲ್ಲಿ ನಡೆದ ಸೈಬರ್ ದಾಳಿ ಹಾಗೂ ಉತ್ತರ ಕೊರಿಯಾದ ಅಣ್ವಸ್ತ್ರ ಸಹಿತ ದೂರಗಾಮಿ ಕ್ಷಿಪಣಿ ಪರೀಕ್ಷೆ ಭಾರತೀಯ ಷೇರುಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ ಭಾರತೀಯ ಷೇರು ಮಾರುಕಟ್ಟೆ ಎಂದಿನಂತ ವಹಿವಾಟು ನಡೆಸಿದೆ. ಇಂದಿನ ವಹಿವಾಟಿನಲ್ಲಿ ಪ್ರಮುಖವಾಗಿ ಬ್ಯಾಂಕಿಂಗ್, ಉಕ್ಕು ಕ್ಷೇತ್ರಗಳು ಲಾಭಾಂಶ ಕಂಡಿದ್ದು, ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯ ಗರಿಷ್ಠ ಶೇ2.02ರಷ್ಟು ಏರಿಕೆ ಕಂಡಿದೆ. ಅಂತೆಯೇ ಟಾಟಾ ಸ್ಟೀಲ್ ಷೇರುಗಳ ಮೌಲ್ಯ ಶೇ3.96ರಷ್ಚು ಏರಿಕೆಯಾಗಿದ್ದು, ಡಾ.ರೆಡ್ಡೀಸ್ ಲ್ಯಾಬ್ ಸಂಸ್ಥೆಯ ಷೇರುಗಳ ಮೌಲ್ಯ ಶೇ.1.81ರಷ್ಟು ಏರಿಕೆ ಕಂಡಿದೆ.