ಮೇ 18 ರಿಂದ ಭಾರತದಲ್ಲಿ ನೋಕಿಯಾ 3310 ಮಾರಾಟ: ಬೆಲೆ ಎಷ್ಟು ಗೊತ್ತೆ?

ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಸಾಂಪ್ರದಾಯಿಕ ನೋಕಿಯಾ 3310 ಮೊಬೈಲ್ ಮೇ 18 ರಿಂದ ಭಾರತದ ಮಾರುಕಟ್ಟೆಯಲ್ಲಿ..
ನೋಕಿಯಾ3310
ನೋಕಿಯಾ3310
ನವದೆಹಲಿ: ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಸಾಂಪ್ರದಾಯಿಕ ನೋಕಿಯಾ 3310 ಮೊಬೈಲ್ ಮೇ 18 ರಿಂದ ಭಾರತದ ಮಾರುಕಟ್ಟೆಯಲ್ಲಿ ಸಿಗಲಿದೆ.
ಭಾರತ ಮಾರುಕಟ್ಟೆಯಾದ್ಯಂತ ನೋಕಿಯಾ 3310 ಮೊಬೈಲ್ ರು.3.310 ಗೆ ಸಿಗಲಿದೆ ಎಂದು ಎಚ್.ಎಂ ಡಿ ಗ್ಲೋಬಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಾಲ್ಕು ಬಣ್ಣಗಳಲ್ಲಿ ನೋಕಿಯಾ 33120 ಮೊಬೈಲ್ ಲಭ್ಯವಿದ್ದು, ಹಳದಿ, ಕೆಂಪು , ಗಾಢ ನೀಲಿ ಮತ್ತು ಗ್ರೇ ಕಲರ್ ಗಳಲ್ಲಿ ಲಭ್ಯವಿದೆ.
ಈ ಮೊಬೈಲ್ ನಲ್ಲಿ ಡ್ಯೂಯಲ್ ಸಿಮ್, 2.5 ಜಿ ಫೀಚರ್ 1200 ಮೆಗಾಹರ್ಟ್ಸ್ ಬ್ಯಾಟರಿ ಇದ್ದು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೇ 22 ಗಂಟೆಗಳ ಕಾಲ ಬ್ಯಾಟರಿ ಪ್ಯಾಕ್ ಅಪ್ ಇರಲಿದೆ. 2.4 ಇಂಚು ಡಿಸ್ ಪ್ಲೇ, 2 ಮೆಗಾ ಫಿಕ್ಸೆಲ್ ಕ್ಯಾಮೆರಾ, ಜೊತೆಗೆ ಎಲ್ ಇಡಿ ಫ್ಲಾಶ್, ಬ್ಲೂಟೂತ್ ಮತ್ತು ಯುಎಸ್ ಬಿ ಕನೆಕ್ಷನ್ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com