ಅಕ್ರಮ ದಾಸ್ತಾನಿನ ಮೇಲೆ ಐಟಿ ದಾಳಿ: ಈರುಳ್ಳಿ ದರ ಶೇ.35ರಷ್ಟಕ್ಕೆ ಇಳಿಕೆ!

ನಾಸಿಕ್ ನಲ್ಲಿ ಅಕ್ರಮ ಈರುಳ್ಳಿ ದಾಸ್ತಾನು ಹೊಂದಿದ್ದ 7 ಈರುಳ್ಳಿ ವರ್ತರ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಈರುಳ್ಳಿ ದರ ಶೇ.35 ರಷ್ಟು ಇಳಿಕೆಯಾಗಿದೆ.
Onion prices
Onion prices
ನಾಸಿಕ್: ನಾಸಿಕ್ ನಲ್ಲಿ ಅಕ್ರಮ ಈರುಳ್ಳಿ ದಾಸ್ತಾನು ಹೊಂದಿದ್ದ 7 ಈರುಳ್ಳಿ ವರ್ತರ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಈರುಳ್ಳಿ ದರ ಶೇ.35 ರಷ್ಟು ಇಳಿಕೆಯಾಗಿದೆ. 
ಐಟಿ ದಾಳಿ ನಡೆದ ಬಳಿಕ ಸಗಟು ಮಾರುಕಟ್ಟೆಯಲ್ಲಿನ ಈರುಳ್ಳಿ ದರ ಇಳಿಕೆ ಕಂಡಿರುವ ಪರಿಣಾಮವಾಗಿ ಲಸಾಲ್ಗಾಂವ್ ನಲ್ಲಿ ಈರುಳ್ಳಿಯನ್ನು ಹರಾಜು ಹಾಕುತ್ತಿದ್ದ ರೈತರು ಹರಾಜು ಹಾಕುವುದನ್ನು ನಿಲ್ಲಿಸಿ ಈರುಳ್ಳಿ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. 
ನಾಸಿಕ್ ಜಿಲ್ಲೆಯ ಲಸಾಲ್ಗಾಂವ್ ನಲ್ಲಿರುವ ಸುಮಾರು 25 ಪ್ರದೇಶದಲ್ಲಿರುವ 7 ಪ್ರಮುಖ ಈರುಳ್ಳಿ ವರ್ತಕರ ಮೇಲೆ ಐಟಿ ದಾಳಿ ನಡೆದಿದ್ದು, ಐಟಿ ದಾಳಿ ಮುಂದುವರೆದಿದೆ. ಸುಮಾರು 120 ಅಧಿಕಾರಿಗಳು ದಾಳಿ ನಡೆಸಿದ್ದು, ಕೃತಕ ಅಭಾವ ಸೃಷ್ಟಿಸಲು ಯತ್ನಿಸುತ್ತಿದ್ದ ವರ್ತಕರ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ದಾಳಿ ನಡೆಸಿರುವುದಾಗಿ ಅಧಿಕಾಅರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com