ರಾಹುಲ್ ದ್ರಾವಿಡ್ ಮಾದರಿಯಾಗಿರಲಿ, ನವಜೋತ್ ಸಿಂಗ್ ಸಿಧು ಅಬ್ಬರ ಸೂಕ್ತವಲ್ಲ: ಆರ್ ಬಿಐ ಗೆ ರಘುರಾಮ್ ರಾಜನ್
ಎನ್ ಪಿಎಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ನಡುವೆ ಉಂಟಾಗಿರುವ ತಿಕ್ಕಾಟದ ಬಗ್ಗೆ ಮಾಜಿ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಪ್ರತಿಕ್ರಿಯೆ ನೀಡಿದ್ದು, ಕ್ರಿಕೆಟ್ ನ ಉದಾಹರಣೆಯನ್ನು
ರಾಹುಲ್ ದ್ರಾವಿಡ್ ಮಾದರಿಯಾಗಿರಲಿ, ನವಜೋತ್ ಸಿಂಗ್ ಸಿಧು ಅಬ್ಬರ ಸೂಕ್ತವಲ್ಲ: ಆರ್ ಬಿಐ ಗೆ ರಘುರಾಮ್ ರಾಜನ್
ನವದೆಹಲಿ: ಎನ್ ಪಿಎಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ನಡುವೆ ಉಂಟಾಗಿರುವ ತಿಕ್ಕಾಟದ ಬಗ್ಗೆ ಮಾಜಿ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಪ್ರತಿಕ್ರಿಯೆ ನೀಡಿದ್ದು, ಕ್ರಿಕೆಟ್ ನ ಉದಾಹರಣೆಯನ್ನು ನೀಡಿದ್ದಾರೆ.
ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್, ರಾಹುಲ್ ದ್ರಾವಿಡ್ ನ ಮಾದರಿಯನ್ನು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಎರಡೂ ಸಂಸ್ಥೆಗಳು ಪರಸ್ಪರ ಉದ್ದೇಶ ಹಾಗೂ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ಆರ್ ಬಿಐ ರಾಹುಲ್ ದ್ರಾವಿಡ್ ರಂತೆ ಆಡಬೇಕೆ ಹೊರತು, ಕಾರ್ಯಾಚರಣೆ ನಿರ್ಧಾರಗಳಲ್ಲಿ ನವಜೋತ್ ಸಿಂಗ್ ಸಿಧು ತರ ಅಬ್ಬರಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಆರ್ ಬಿಐ ನ್ನು ಸೀಟ್ ಬೆಲ್ಟ್ ಗೆ ಹೋಲಿಕೆ ಮಾಡಿರುವ ರಘುರಾಮ್ ರಾಜನ್ ಆರ್ ಬಿಐ ಸೀಟ್ ಬೆಲ್ಟ್ ಇದ್ದಂತೆ ಅದಿಲ್ಲದಿದ್ದರೆ ಅಪಘಾತ ಖಂಡಿತ ಎಂದಿದ್ದಾರೆ.
ಆರ್ ಬಿಐ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾದಾಗ ಮಧ್ಯಪ್ರವೇಶಿಸಿದ್ದ ಸರ್ಕಾರವನ್ನು ಖಂಡಿಸಿದ್ದ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ಅವರ ನಡೆಯನ್ನು ರಾಜನ್ ಶ್ಲಾಘಿಸಿದ್ದಾರೆ.