ವಾಣಿಜ್ಯ

ಫೇಸ್ ಬುಕ್ ನಿಂದ 5 ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ

ಫೇಸ್ ಬುಕ್ ನಿಂದ 5 ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: 2021ರ ವೇಳೆಗೆ ಐದು ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ ​ಬುಕ್ ಶನಿವಾರ ಹೇಳಿದೆ.
ವ್ಯವಹಾರ ವಿಸ್ತರಿಸಲು ಮತ್ತು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಡಿಜಿಟಲ್ ಮಾಧ್ಯಮದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಅಮೆರಿಕ ಮೂಲಕ ಕಂಪನಿ ಹೇಳಿಕೊಂಡಿದೆ. ಅಲ್ಲದೆ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಈಗಾಗಲೇ ಒಂದು ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ ನೀಡಿರುವುದಾಗಿ ತಿಳಿಸಿದೆ.
ಒಂದು ಸಣ್ಣ ಬ್ಯುಸಿನೆಸ್ ಅನ್ನು ಸಹ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಫೇಸ್ ಬುಕ್ ಬದ್ಧವಾಗಿದೆ. ಈ ಸಂಬಂಧ ನಾವು ವಿವಿಧ ಸಂಸ್ಥೆಗಳ ಮೂಲಕ ಜನರನ್ನು ತಲುಪುತ್ತಿದ್ದೇವೆ ಎಂದು ಫೇಸ್ ಬುಕ್ ಸಾರ್ವಜನಕಿ ನೀತಿ ನಿರ್ದೇಶಕ ಅಂಖಿ ದಾಸ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
50 ಪಾಲುದಾರರ ಸಹಕಾರದೊಂದಿಗೆ ಫೇಸ್ ಬುಕ್ ಈಗಾಗಲೇ ದೇಶದ 150 ನಗರ ಮತ್ತು 48 ಸಾವಿರ ಗ್ರಾಮಗಳಲ್ಲಿ ಒಂದು ಮಿಲಿಯನ್ ಜನರಿಗೆ ತರಬೇತಿ ನೀಡಿದ್ದೇವೆ ಎಂದು ದಾಸ್ ಹೇಳಿದ್ದಾರೆ.
ಇತ್ತೀಚಿಗಷ್ಟೇ ಫೇಸ್​ಬುಕ್ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಡಿಜಿಟಲ್ ಸಾಕ್ಷರತೆಯ ಗ್ರಂಥಾಲಯಕ್ಕೆ ಚಾಲನೆ ನೀಡಿತ್ತು. ಬೆಂಗಾಲಿ, ಹಿಂದಿ, ತಮಿಳು, ತೆಲುಗು ಮಲಯಾಳಂ ಭಾಷೆಗಳ ಕಥಾನಕಗಳ ಸಂಗ್ರಹವನ್ನು ಫೇಸ್​ಬುಕ್ ಪರಿಚಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.