ಸತತ 17ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ: ಇಂದಿನ ದರ ಪಟ್ಟಿ ಇಂತಿದೆ

ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆ ಮುಂದುವರೆದಿದ್ದು, ಸತತ 17ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆ ಮುಂದುವರೆದಿದ್ದು, ಸತತ 17ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ.

ಮಂಗಳವಾರ ಕ್ರಮವಾಗಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 20 ಪೈಸೆ ಮತ್ತು ಡೀಸೆಲ್ ದರ 55 ಪೈಸೆ ಏರಿಕೆಯಾಗಿದೆ. ಆ ಮೂಲಕ ನಿರಂತರ ಹೆಚ್ಚಳದಿಂದ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ 10.01 ರೂ ಮತ್ತು ಪೆಟ್ರೋಲ್‌ ಬೆಲೆ 8.50ರೂ ಅಷ್ಟು ಹೆಚ್ಚಳವಾಗಿದೆ. 

ಪ್ರಸ್ತುತ ಬೆಳಗ್ಗೆ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ 75.59 ರೂಗೆ ಏರಿಕೆಯಾಗಿದ್ದು, ಪೆಟ್ರೋಲ್‌ ಬೆಲೆ 82.32 ರೂ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಡೀಸೆಲ್‌ ದರ 79.40 ಮತ್ತು ಪೆಟ್ರೋಲ್‌ ದರ 79.76ಕ್ಕೆ ಏರಿಕೆಯಾಗಿದೆ. ಇತ್ತ ಮುಂಬೈನಲ್ಲಿ ಡೀಸೆಲ್‌ ದರ 77.24 ರೂ ಮತ್ತು ಪೆಟ್ರೋಲ್‌ ದರ 86.36 ರೂಗೆ ಹೆಚ್ಚಳವಾಗಿದೆ. 

ಕೇಂದ್ರ ಸರ್ಕಾರ ಮಾರ್ಚ್‌ 14ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ರೂ 3 ಹೆಚ್ಚಿಸಿತು. ಮತ್ತೆ ಮೇ 5ರಂದು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲಿನ ತೆರಿಗೆ ರೂ10 ಹಾಗೂ ಡೀಸೆಲ್‌ಗೆ ರೂ13 ಹೆಚ್ಚಳ ಮಾಡಿತ್ತು. ಇದರಿಂದಾಗಿ ಸರ್ಕಾರಕ್ಕೆ ರೂ2 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವರಮಾನ ಸಂಗ್ರಹವಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com