ಸತತ 18ನೇ ದಿನವೂ ಇಂಧನ ದರ ಏರಿಕೆ: ದೆಹಲಿಯಲ್ಲಿ ಪೆಟ್ರೋಲ್'ಗಿಂತಲೂ ದುಬಾರಿಯಾದ ಡೀಸೆಲ್!

ತೈಲ ದರಗಳು ಸತತ 17 ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಆದರೆ, 18ನೇ ದಿನವಾದ ಬುಧವಾರದ ದಿನದಂದು ಏರಿಕೆಯಾಗಿರುವ ಬೆಲೆ ಏರಿಕೆ ಡೀಸೆಲ್ ದರದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ತೈಲ ದರಗಳು ಸತತ 17 ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಆದರೆ, 18ನೇ ದಿನವಾದ ಬುಧವಾರದ ದಿನದಂದು ಏರಿಕೆಯಾಗಿರುವ ಬೆಲೆ ಏರಿಕೆ ಡೀಸೆಲ್ ದರದಲ್ಲಿ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ. 

ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆಗಿಂತಲೂ ಡೀಸೆಲ್ ದರ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್ ಗಿಂತಲೂ ಡೀಸೆಲ್ ದರ ಹೆಚ್ಚಾಗಿರುವುದಕ್ಕೆ ಜನತೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಪೆಟ್ರೋಲ್ ದರ ರೂ. 79.76ರಷ್ಟಿದ್ದರೆ, ಡೀಸೆಲ್ ದರ ರೂ.79.88ಕ್ಕೆ ತಲುಪಿದೆ. ಅಂದರೆ ಪೆಟ್ರೋಲ್ ಗಿಂತಲೂ ಡೀಸೆಲ್ ದರ 12 ಪೈಸೆಯಷ್ಟು ಹೆಚ್ಚಾಗಿದೆ. 

ದೆಹಲಿಯಲ್ಲಿಂದು ಪೆಟ್ರೋಲ್ ದರ ಏರಿಕೆ ಮಾಡಲಾಗಿಲ್ಲ. ಅದರೆ, ಡಡೀಸೆಲ್ ಬೆಲೆಯಲ್ಲಿ 48 ಪೈಸೆಯಷ್ಟು ಏರಿಕೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com