ಜಿಯೋಫೋನ್‌ ಬಳಕೆದಾರರಿಗೆ ರಿಲಯನ್ಸ್ ಜಿಯೋ ಬಂಪರ್ ಆಫರ್!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ (ಆರ್ ಜಿಯೋ) ತನ್ನ ಜಿಯೋಫೋನ್ ಬಳಕೆದಾರರಿಗೆ ಹೊಸ ಪ್ರಯೋಜನಗಳನ್ನು ಘೋಷಿಸಿದ್ದು, ಉಚಿತವಾಗಿ 100 ನಿಮಿಷಗಳ ಕರೆಗಳು  ಮಾಡಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಂಎಸ್ ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.
ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ
Updated on: 

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ (ಆರ್ ಜಿಯೋ) ತನ್ನ ಜಿಯೋಫೋನ್ ಬಳಕೆದಾರರಿಗೆ ಹೊಸ ಪ್ರಯೋಜನಗಳನ್ನು ಘೋಷಿಸಿದ್ದು, ಉಚಿತವಾಗಿ 100 ನಿಮಿಷಗಳ ಕರೆಗಳು  ಮಾಡಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಂಎಸ್ ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ದೇಶಾದ್ಯಂತದ ಇರುವ ಎಲ್ಲಾ ಜಿಯೋಫೋನ್ ಬಳಕೆದಾರರಿಗೆ ಈ ಉಚಿತ ಕರೆ ಮಾಡುವ ನಿಮಿಷಗಳು ಮತ್ತು ಉಚಿತ ಎಸ್‌ಎಂಎಸ್‌ ಮಾಡುವ ಅವಕಾಶವನ್ನು ಏಪ್ರಿಲ್ 17ರ ವರೆಗೆ ಒದಗಿಸಲಾಗಿದೆ. ಇದಲ್ಲದೆ ಎಲ್ಲಾ ಜಿಯೋ ಫೋನ್ ಬಳಕೆದಾರರು ಮಾನ್ಯತೆಯ ಅವಧಿ ಮುಗಿದ  ನಂತರವೂ ಒಳ ಬರುವ ಕರೆಗಳನ್ನು ಸ್ವೀಕರಿಸಲಿದ್ದಾರೆ.

ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವ ಹೆಚ್ಚಿನ ಶೇಕಡಾವಾರು ಬಳಕೆದಾರರನ್ನು ಆರ್‌ ಜಿಯೋ ಹೊಂದಿದೆ. ಚಿಲ್ಲರೆ ಅಂಗಡಿಗಳ ಮೂಲಕ ರೀಚಾರ್ಜ್ ಮಾಡುವವರಿಗೆ ಮತ್ತು ಪ್ರಸ್ತುತ ಲಾಕ್‌ಡೌನ್‌ನಿಂದಾಗಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ, ಯುಪಿಐ, ಎಟಿಎಂ, ಎಸ್‌ ಎಂಎಸ್  ಮತ್ತು ಕರೆ ಮಾಡುವ ಮೂಲಕ ರೀಚಾರ್ಜ್ ಮಾಡಿಕೊಳ್ಳಲು ಜಿಯೋ ಪರ್ಯಾಯ ಚಾನಲ್‌ಗಳನ್ನು ಒದಗಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com