ಇನ್`ಸ್ಟಂಟ್ ಪ್ಯಾನ್ ಕಾರ್ಡ್ ಸೇವೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡಿದರು.

ಈ ಹಿಂದೆ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕೇಂದ್ರ ಸರ್ಕಾರ ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆ ಆರಂಭಿಸಿದ್ದು, ಇ-ಕೆವೈಸಿ ಮೂಲಕ ಅರ್ಜಿದಾರರು ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಇಂತಹ ಇನ್`ಸ್ಟಂಟ್ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ನಿರ್ಮಲಾ ಸೀತಾರಾಮನ್ ಅವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದರು.

ಆಧಾರ್ ಕಾರ್ಡ್ ಮತ್ತು ಅದಕ್ಕೆ ನೊಂದಾಯಿತ ಮೊಬೈಲ್ ನಂಬರ್ ಅನ್ನು ನೊಂದಾಯಿಸುವ ಮೂಲಕ ಅರ್ಜಿದಾರರು ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಈ ಪ್ರಕ್ರಿಯೆ ಸಂಪೂರ್ಣ ಪೇಪರ್ ಲೆಸ್ (ಯಾವುದೇ ರೀತಿ ಕಾಗದ ರಹಿತ) ಆಗಿದ್ದು, ಇ-ಪ್ಯಾನ್ ಕಾರ್ಡ್ ವಿತರಣೆ  ಮಾಡಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣ ಉಚಿತ ಎಂದು ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವಾಲಯ ಇ-ಪ್ಯಾನ್ ಸೇವೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಬಲ ನೀಡಲಿದೆ. ಇದರಿಂದ ತೆರಿಗೆ ಪಾವತಿದಾರರಿಗೆ ನೆರವಾಗಲಿದೆ.

ಮೇ25ರವರೆಗೂ ದೇಶದಲ್ಲಿ 50.52 ಕೋಟಿ ರೂ ಪ್ಯಾನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com