ವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆ
ಬೆಂಗಳೂರು: ಪ್ರಪಂಚದಲ್ಲೇ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಎನ್ನುವ ಹೆಸರಿಗೆ ಪಾತ್ರವಾಗಿದ್ದ ಜಿಯೊ ಫೋನ್ 'ನೆಕ್ಸ್ಟ್' ಗೆ ಮೈಕ್ರೊ ಚಿಪ್ ಕೊರತೆ ಉಂತಾಗಿದೆ. ಈ ಕಾರಣಕ್ಕೆ ಹೊಸ ಮಾಡೆಲ್ ಜಿಯೊ ಫೋನ್ ಬಿಡುಗಡೆ ವಿಳಂಬವಾಗಲಿದೆ. ರಿಲಯನ್ಸ್ ಜಿಯೊ ಮತ್ತು ಗೂಗಲ್ ಸಹಯೋಗದಲ್ಲಿ ಈ ಫೋನ್ ತಯಾರಾಗುತ್ತಿದೆ.
ಸದ್ಯ ಲಭ್ಯವಿರುವ ಮಾಹಿತಿಯಂತೆ ದೀಪಾವಳಿಯ ಸಮಯದಲ್ಲಿ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ. ಈ ಬಜೆಟ್ ಸ್ಮಾರ್ಟ್ ಫೋನ್ ಬೆಲೆ 3,500 ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಸ್ಥೆ ಇದುವರೆಗೂ ಅಧಿಕೃತ ಬೆಲೆ ಬಹಿರಂಗಪಡಿಸಿಲ್ಲ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಸೆಮಿಕಂಡಕ್ಟರ್ ಮೈಕ್ರೊ ಚಿಪ್ ಗಳ ಕೊರತೆ ಕಂಡುಬಂಡಿದೆ. ಈ ಹಿಂದೆ ಈ ಮೊಬೈಲ್ ಬೆಲೆ 3,500 ಎಂದು ಹೇಳಲಾಗಿತ್ತಾದರೂ, ಇದೀಗ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಮೊಬೈಲ್ ಫೋನ್ ಬೆಲೆಯೂ ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ.
ಇದೇ ವೇಳೆ ಚಿಪ್ ಕೊರತೆಯಿಂದ ಇತರೆ ಸಂಸ್ಥೆಗಳ ಮೊಬೈಲ್ ಫೋನ್ ಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪರಿಣತರು ಆಂದಾಜಿಸಿದ್ದಾರೆ.
Related Article
ಫೋರ್ಡ್ ಚೆನ್ನೈ ಘಟಕ ಮಾರಾಟಕ್ಕೆ ಖರೀದಿದಾರರೊಡನೆ ಮಾತುಕತೆ: 3,300 ಕೆಲಸಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿ
ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆಯೇ: ವಿ ಶೇಪ್ ಪ್ರಗತಿ ಎಷ್ಟು ನಿಜ ಎಷ್ಟು ಸುಳ್ಳು?
ಎಲ್ಲಾ ಆಕಾರದ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ಇದೆ: ಸಿಬಿಐಸಿ ಸ್ಪಷ್ಟನೆ
ಟ್ರೂ ಕಾಲರ್ ಮಾರುಕಟ್ಟೆಯನ್ನು ಕಸಿಯಲು ಭಾರತದ ಟೆಕ್ಕಿಗಳಿಂದ ಭಾರತ್ ಕಾಲರ್ ಐಡಿ ಆಪ್!
ಎಲ್ ಪಿಜಿ ಸಿಲೆಂಡರ್ ಮತ್ತಷ್ಟು 'ಭಾರ': ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
ಸೆಪ್ಟೆಂಬರ್ನಿಂದ ಮಾರುತಿ ಸುಜುಕಿ ಕಾರುಗಳ ದರ ಹೆಚ್ಚಳ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ