ಮೂನ್`ಲೈಟಿಂಗ್: ವಿಪ್ರೋ ಆಯ್ತು, ಈಗ ಇನ್ಫೋಸಿಸ್ ಉದ್ಯೋಗಿಗಳ ವಜಾ!

ದೇಶದ ಐಟಿ ಉದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿರುವ ಮೂನ್‌ಲೈಟಿಂಗ್ (ಖಾಲಿ ಸಮಯದಲ್ಲಿ ಮತ್ತೊಂದು ಸಂಸ್ಥೆಗಾಗಿ ಕೆಲಸ ಮಾಡುವುದು) ಆರೋಪದಡಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆದಿದ್ದು, ವಿಪ್ರೋ ಬೆನ್ನಲ್ಲೇ ಇದೀಗ ಕರ್ನಾಟಕ ಮೂಲದ ಇನ್ಫೋಸಿಸ್ ಕೂಡ ಮೂನ್`ಲೈಟಿಂಗ್ ನಲ್ಲಿ ತೊಡಗಿದ್ದ ತನ್ನ ಉದ್ಯೋಗಿಗಳನ್ನು ವಜಾ ಮಾಡಿದೆ.
ಇನ್ಫೋಸಿಸ್
ಇನ್ಫೋಸಿಸ್
Updated on

ಬೆಂಗಳೂರು: ದೇಶದ ಐಟಿ ಉದ್ಯಮದಲ್ಲಿ ಭಾರಿ ಸಂಚಲನ ಮೂಡಿಸಿರುವ ಮೂನ್‌ಲೈಟಿಂಗ್ (ಖಾಲಿ ಸಮಯದಲ್ಲಿ ಮತ್ತೊಂದು ಸಂಸ್ಥೆಗಾಗಿ ಕೆಲಸ ಮಾಡುವುದು) ಆರೋಪದಡಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆದಿದ್ದು, ವಿಪ್ರೋ ಬೆನ್ನಲ್ಲೇ ಇದೀಗ ಕರ್ನಾಟಕ ಮೂಲದ ಇನ್ಫೋಸಿಸ್ ಕೂಡ ಮೂನ್`ಲೈಟಿಂಗ್ ನಲ್ಲಿ ತೊಡಗಿದ್ದ ತನ್ನ ಉದ್ಯೋಗಿಗಳನ್ನು ವಜಾ ಮಾಡಿದೆ.

ಹೌದು.. ಕಳೆದ ಕೆಲವು ತಿಂಗಳುಗಳಿಂದ ಭಾರಿ ಸುದ್ದಿಗೆ ಗ್ರಾಸವಾಗಿರುವ ಐಟಿ ಉದ್ಯೋಗಿಗಳ ಮೂನ್ ಲೈಟಿಂಗ್ ಆಚರಣೆಗೆ ಶತಾಯಗತಾ ಅಂತ್ಯ ಹಾಡಬೇಕು ಎಂದು ನಿರ್ಧರಿಸಿರುವ ಐಟಿ ಸಂಸ್ಥೆಗಳು 'ಗದಾಪ್ರಹಾರ'ಕ್ಕೆ ಮುಂದಾಗಿದ್ದು, ಏಕಕಾಲದಲ್ಲಿ ಎರಡೆರಡು ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಮೂನ್`ಲೈಟಿಂಗ್ ಸಿಬ್ಬಂದಿಗಳನ್ನು ವಜಾ ಮಾಡುತ್ತಿವೆ. ಈ ಹಿಂದೆ ವಿಪ್ರೋ ಕೂಡ ಮೂನ್`ಲೈಟಿಂಗ್ ತನ್ನ ಸಿಬ್ಬಂದಿಗಳಿಗೆ ಗೇಟ್ ಪಾಸ್ ನೀಡಿತ್ತು. ಇದೀಗ ಇನ್ಫೋಸಿಸ್ ತನ್ನ ಸಿಬ್ಬಂದಿಗಳನ್ನು ವಜಾಗೊಳಿಸಿದೆ. 

Q2 ವರದಿ ಪ್ರಕಟಿಸಿದ ಎಲ್ಲಾ ಪ್ರಮುಖ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೂನ್‌ಲೈಟಿಂಗ್ ವಿರುದ್ಧ ಎಚ್ಚರಿಕೆ ನೀಡಿದ್ದವು. ಇನ್ಫೋಸಿಸ್ ಕೂಡ ಇದು ತನ್ನ ಸಂಸ್ಥೆಯ ಮೂಲ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಹೇಳುವ ಮೂಲಕ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಇದೀಗ ಮೂನ್`ಲೈಟಿಂಗ್ ನಲ್ಲಿ ತೊಡಗಿದ್ದ ಸಿಬ್ಬಂದಿಗಳನ್ನು ವಜಾ ಮಾಡಿದೆ.

ಈ ಹಿಂದೆ ಸಂಸ್ಥೆಯ Q2 ವರದಿ ಬಿಡುಗಡೆ ವೇಳೆ ಮಾತನಾಡಿದ್ದ ಸಂಸ್ಥೆಯ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಅವರು ಮೂನ್`ಲೈಟಿಂಗ್ ನಲ್ಲಿ ತೊಡಗಿದ್ದ ಸಿಬ್ಬಂದಿಗಳನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದ್ದರು. ಆದರೆ ಎಷ್ಟು ಮಂದಿಯನ್ನು ವಜಾಗೊಳಿಸಲಾಗಿದೆ ಎಂಬ ನಿಖರ ಮಾಹಿತಿಯನ್ನು ಅವರು ಹಂಚಿಕೊಂಡಿರಲಿಲ್ಲ. ಕಳೆದ 12 ತಿಂಗಳುಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉದ್ಯೋಗಿಗಳನ್ನು ಕೈ ಬಿಡಲಾಗಿದೆ. ಅವರು  ಗೌಪ್ಯತೆಯ ಸಮಸ್ಯೆಗಳಿರುವ ಎರಡು ನಿರ್ದಿಷ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ನಾವು ಸಂಸ್ಥೆಯಿಂದ ಕೈ ಬಿಟ್ಟಿದ್ದೇವೆ ಎಂದು ಹೇಳಿದ್ದರು.

ವ್ಯವಸ್ಥಾಪಕರ ಪೂರ್ವಾನುಮತಿ ಪಡೆದ ನಂತರ ತಮ್ಮ ಕೆಲಸವನ್ನು ಮೀರಿ ಕಲಿಯುವ ಉದ್ಯೋಗಿಗಳ ಆಕಾಂಕ್ಷೆಗಳನ್ನು ನಾವು ಅವರು ಬೆಂಬಲಿಸುತ್ತೇವೆ ಎಂದು ಹೇಳಿದ್ದ ಅವರು, ಈ ಹಣಕಾಸು ವರ್ಷದಲ್ಲಿ ಕಂಪನಿಯು ಇದುವರೆಗೆ 40,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿದೆ ಎಂದರು. ಈ ಹಿಂದೆ, FY23 ರಲ್ಲಿ 50,000 ಫ್ರೆಷರ್‌ಗಳನ್ನು ನೇಮಿಸಿಕೊಳ್ಳುವುದಾಗಿ ಸಂಸ್ಥೆ ಹೇಳಿತ್ತು. ಇನ್ಫೋಸಿಸ್‌ನ ಸಿಎಫ್‌ಒ ನಿಲಂಜನ್ ರಾಯ್ ಅವರು ಫ್ರೆಷರ್‌ಗಳನ್ನು ಆನ್‌ಬೋರ್ಡಿಂಗ್ (ನೇಮಕ ಪ್ರಕ್ರಿಯೆ) ಮಾಡುವ ಹಾದಿಯಲ್ಲಿದ್ದಾರೆ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಅವರು 10,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಬಹುದು ಎಂದು ಹೇಳಿದರು.

ಫ್ರೆಷರ್‌ಗಳನ್ನು ನೇಮಕ ಮಾಡಲು ಯಾವುದೇ ವಿಳಂಬವಾಗಿಲ್ಲ. Q2 ನಲ್ಲಿ ಮಾತ್ರ, ಕಂಪನಿಯು 10,000 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 28.4% ಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ನೇಮಕಾತಿ ಪ್ರಮಾಣ 27.1% ಕ್ಕೆ ಇಳಿದಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ಆಟ್ರಿಷನ್ ಕಡಿಮೆಯಾಗುತ್ತಿದೆ ಎಂದು ಇನ್ಫೋಸಿಸ್ ಸಿಇಒ ಹೇಳಿದ್ದಾರೆ.  

ಎರಡುಕಡೆ ಉದ್ಯೋಗ ಮಾಡುವಂತಿಲ್ಲ: ಇನ್ಫೋಸಿಸ್, ಮೈಂಡ್‌ಟ್ರೀ
ಗುರುವಾರ ತಮ್ಮ Q2 ಫಲಿತಾಂಶಗಳನ್ನು ಪ್ರಕಟಿಸಿದ Infosys ಮತ್ತು Mindtree ಎರಡೂ ಸಂಸ್ಥೆಗಳು ಎರಡು ಉದ್ಯೋಗ ಮಾಡುವ ಪ್ರಕ್ರಿಯೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com