Gold Rate: ಸಾರ್ವಕಾಲಿಕ ದಾಖಲೆ ಏರಿಕೆ ಬಳಿಕ ಕೊನೆಗೂ ಚಿನ್ನದ ದರ ಇಳಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ಪಟ್ಟಿ!

ಗಗನಕ್ಕೇರಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ. 22 ಕ್ಯಾರಟ್‌ ಚಿನ್ನದ ದರದಲ್ಲಿ 100 ರೂ ಇಳಿಕೆಯಾಗಿದ್ದು....
Gold rate
ಚಿನ್ನದ ದರ ಏರಿಕೆ
Updated on

ಮುಂಬೈ: ಇತ್ತೀಚೆಗಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ದರ ಇಂದು ದಿಢೀರ್ ಕುಸಿತ ಕಂಡಿದ್ದು, ಹಳದಿ ಲೋಹದ ನೂತನ ದರ ಪಟ್ಟಿಗಳು ಇಂತಿವೆ.

ಗಗನಕ್ಕೇರಿದ್ದ ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಗುರುವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ. 22 ಕ್ಯಾರಟ್‌ ಚಿನ್ನದ ದರದಲ್ಲಿ 100 ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ಬಂಗಾರದ ಧಾರಣೆ ಗ್ರಾಂಗೆ 110ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ದರ 9,005ಕ್ಕೆ ಇಳಿಕೆಯಾಗಿದ್ದು, ಅಂತೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 90,050ಕ್ಕೆ ಇಳಿಕೆಯಾಗಿದೆ.

ಅಂತೆಯೇ 24 ಕ್ಯಾರಟ್‌ ನ ಒಂದು ಗ್ರಾಂ ಚಿನ್ನದ ಬೆಲೆ 9,824 ರೂ ಇಳಿಕೆಯಾಗಿದ್ದು, 24 ಕ್ಯಾರಟ್‌ ನ 10 ಗ್ರಾಂ ಚಿನ್ನದ ಬೆಲೆ 98,240 ರೂ ಗೆ ಇಳಿಕೆಯಾಗಿದೆ.

Gold rate
Gold rate: ಸುಂಕ ಸಮರದ ನಡುವೆ ಚಿನ್ನದ ಬೆಲೆ ಗಗನಕ್ಕೆ! 10 ಗ್ರಾಂ ಬೆಲೆ 96,450 ರೂ; ಬೆಂಗಳೂರಿನಲ್ಲಿ ಈಗ ಎಷ್ಟಿದೆ ಗೊತ್ತಾ?

ಬೆಳ್ಳಿ ದರದಲ್ಲೂ ಅಲ್ಪ ಇಳಿಕೆ

ಇನ್ನು ಬೆಳ್ಳಿಯ ಬೆಲೆ ಗ್ರಾಂಗೆ ಅಲ್ಪ ಇಳಿಕೆಯಾಗಿದ್ದು, ಪ್ರತೀ ಗ್ರಾಂ ಬೆಳ್ಳಿ ದರದಲ್ಲಿ 10 ಪೈಸೆ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 100.90 ರೂಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ 1010 ರೂಗೆ ಮತ್ತು 1 Kg ಬೆಳ್ಳಿದರ 1,00,900 ರೂ ಗೆ ಇಳಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com