ವಾಣಿಜ್ಯ

Indian Stock Market: ಬಜೆಟ್ ಉತ್ಸಾಹ; Sensex 746 ಅಂಕ ಏರಿಕೆ, NIFTY ಚೇತೋಹಾರಿ ವಹಿವಾಟು!

Indian Stock Market: ಬಜೆಟ್ ಉತ್ಸಾಹ; Sensex 746 ಅಂಕ ಏರಿಕೆ, NIFTY ಚೇತೋಹಾರಿ ವಹಿವಾಟು!
ಭಾರತೀಯ ಷೇರು ಮಾರುಕಟ್ಟೆ
Published On :

ಮುಂಬೈ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ 2025ರ ಮಂಡನೆ ಮುಕ್ತಾಯವಾಗುತ್ತಿದ್ದಂತೆಯೇ ಬಜೆಟ್ ಮಂಡನೆ ಹೂಡಿಕೆದಾರರ ಮೇಲೂ ಪರಿಣಾಮ ಬೀರಿದೆ. ಭಾರತೀಯ ಷೇರುಮಾರುಕಟ್ಟೆ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದು ವಾರದ ರಜಾ ದಿನವಾದರೂ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಚಾಲ್ತಿಯಲ್ಲಿತ್ತು. ಬಜೆಟ್ ಆರಂಭದಲ್ಲಿ ಫ್ಲಾಟ್ ನಲ್ಲಿ ಆರಂಭವಾದ ಮಾರುಕಟ್ಟೆ ಕ್ರಮೇಣ ಏರುಗತಿಯಲ್ಲಿ ವಹಿವಾಟು ನಡೆಸುತ್ತಾ ಸಾಗಿತು. ದಿನದಂತ್ಯದ ವೇಳೆಗೆ ಭಾರತೀಯ ಷೇರುಮಾುರಕಟ್ಟೆಯ ಸೂಚ್ಯಂಕಗಾಳದ ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಗ್ರೀನ್ ನಲ್ಲಿ ಅಂತ್ಯವಾಗಿದೆ.

ಪ್ರಮುಖವಾಗಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಸುಧಾರಣೆ ಅಂಶಗಳು ಮತ್ತು ಮಧ್ಯಮ ವರ್ಗದ ತೆರಿಗೆ ವಿನಾಯಿತಿಯಂತ್ಹ ಅಂಶಗಳು ಮಾರುಕಟ್ಟೆಯ ಉತ್ತಮ ವಹಿವಾಟಿಗೆ ಕಾರಣವಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಆಗ್ರೋ ವಲಯದ ಷೇರುಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿತ್ತು.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.97ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.00ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಒಟ್ಟಾರೆ 746.15ಅಂಕಗಳ ಏರಿಕೆಯೊಂದಿಗೆ 77,505.96 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 232.65 ಅಂಕಗಳ ಏರಿಕೆಯೊಂದಿಗೆ 23,482.15 ಅಂಕಗಳಿಗೆ ಏರಿಕೆಯಾಗಿ ದಿನದ ಮತ್ತು ವಾರಾಂತ್ಯದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಎಫ್ ಎಂಸಿಜಿ, ಆಟೋ ವಲಯದ ಷೇರುಗಳು ಏರಿಕೆ ಕಂಡಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟ್ರೆಂಟ್, ಮಾರುತಿ ಸುಜುಕಿ, ಟಾಟಾ ಕನ್ಸ್ಯೂಮರ್, ಐಷರ್ ಮೋಟಾರ್ಸ್, ಏಷ್ಯನ್ ಪೇಂಟ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಎಲ್ & ಟಿ, ಭಾರತ್ ಎಲೆಕ್ಟ್ರಾನಿಕ್ಸ್, ಪವರ್ ಗ್ರಿಡ್ ಕಾರ್ಪ್, ಎಚ್‌ಡಿಎಫ್‌ಸಿ ಲೈಫ್, ಸಿಪ್ಲಾ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.