Gold Price: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ಮತ್ತೆ ಏರಿಕೆ; ಬೆಳ್ಳಿ 400 ರೂ ಇಳಿಕೆ!

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 8,775 ರೂಪಾಯಿಗೆ ಮಾರಾಟವಾಗುತ್ತಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ನವದೆಹಲಿ: ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಚಿನ್ನ ಕೊಳ್ಳುವವರಿಗೆ ಆಘಾತ ಉಂಟಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಹಳದಿ ಲೋಹದ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿಯೂ ಸೋಮವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ಸೋಮವಾರ ಶೇ 99.9 ಪರಿಶುದ್ಧತೆಯ 10 ಗ್ರಾಂ ಚಿನ್ನಕ್ಕೆ 550 ರೂ. ಏರಿಕೆಯಾಗಿ, 97,350 ರೂ.ಗೆ ತಲುಪಿದೆ. ಶುಕ್ರವಾರ 10 ಗ್ರಾಂ ಅಮೂಲ್ಯ ಲೋಹದ ಬೆಲೆ 96,800 ರೂ.ಗೆ ತಲುಪಿತ್ತು.

ಶೇ 99.5 ಪರಿಶುದ್ಧತೆಯ ಚಿನ್ನದ ಬೆಲೆಯಲ್ಲಿಯೂ 550 ರೂಪಾಯಿ ಏರಿಕೆಯಾಗಿ, 10 ಗ್ರಾಂಗೆ 96,900 ರೂ. ತಲುಪಿದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಹಳದಿ ಲೋಹವು 10 ಗ್ರಾಂಗೆ 96,350 ರೂ.ಗೆ ತಲುಪಿತ್ತು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 8,775 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 9,573 ರೂಪಾಯಿ ಇದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 7,180 ರೂಪಾಯಿ ಇದೆ.

ಪ್ರಾತಿನಿಧಿಕ ಚಿತ್ರ
ಅಕ್ಷಯ ತೃತೀಯ: ದುಬಾರಿಯ್ತು "ಚಿನ್ನ", ವಿಶ್ಲೇಷಕರು ಹೂಡಿಕೆದಾರರಿಗೆ ಕೊಡ್ತಿರೋ ಎಚ್ಚರಿಕೆ ಏನೆಂದರೆ...

ಬೆಳ್ಳಿ ಬೆಲೆ ಇಳಿಕೆ

ಸರಾಫಾ ಅಸೋಸಿಯೇಷನ್‌ನ ಪ್ರಕಾರ, ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 400 ರೂ. ಇಳಿಕೆಯಾಗುವ ಮೂಲಕ 96,700 ರೂ. ತಲುಪಿದೆ. ಹಿಂದಿನ ಮಾರುಕಟ್ಟೆ ಮುಕ್ತಾಯದ ವೇಳೆಗೆ ಬೆಳ್ಳಿ ಬೆಲೆ 97,100 ರೂ.ಗೆ ತಲುಪಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ 46.34 ಡಾಲರ್ ಏರಿಕೆಯಾಗಿ 3,286.83 ಡಾಲರ್‌ಗೆ ತಲುಪಿದೆ.

ಮಂಗಳವಾರದಿಂದ ಪ್ರಾರಂಭವಾಗಲಿರುವ ಯುಎಸ್ ಫೆಡ್‌ನ ಎರಡು ದಿನಗಳ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ನೀತಿ ಸಭೆಗೂ ಮುನ್ನ, ಡಾಲರ್ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಚಿನ್ನ ಔನ್ಸ್‌ಗೆ 3,280 ಡಾಲರ್‌ಗೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com