ಇತರರಿಗೆ ಹೋಲಿಸಿದರೆ ಡಾಲರ್ ಎದುರು ರೂಪಾಯಿ ಮೌಲ್ಯ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್

ರೂಪಾಯಿ ಅಪಮೌಲ್ಯೀಕರಣವು ಕೇವಲ INRಗೆ ಸೀಮಿತವಾಗಿಲ್ಲ. ಏಕೆಂದರೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ನಂತರ, ಏಷ್ಯಾದ ಪ್ರಮುಖ ಕರೆನ್ಸಿಗಳು ಸಹ ಅಪಮೌಲ್ಯಗೊಂಡಿವೆ ಎಂದರು.
Nirmala Sitharaman
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ದೇಶದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ ಮತ್ತು ಇತರ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಗೆ ಹೋಲಿಸಿದರೆ, ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ "ಸಂಪೂರ್ಣವಾಗಿ ಉತ್ತಮವಾಗಿ ಸಾಗುತ್ತಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಹೇಳಿದ್ದಾರೆ.

ಫೆಬ್ರವರಿ 28, 2026 ರಂದು ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗಿನಿಂದ, ರೂಪಾಯಿ ಮೌಲ್ಯವು ಶೇಕಡಾ 4.1 ರಷ್ಟು ಕುಸಿದಿದ್ದು, ಇಂದು ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಡಾಲರ್ ಗೆ 95 ರೂಪಾಯಿಗೆ ತಲುಪಿದೆ.

ರೂಪಾಯಿ ಅಪಮೌಲ್ಯೀಕರಣದ ಕುರಿತು ಇಂದು ಲೋಕಸಭೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್ ಅವರು, "ಭಾರತದ ಆರ್ಥಿಕತೆ ಬಲಿಷ್ಠವಾಗಿದೆ, ನಮ್ಮ ಆರ್ಥಿಕ ಪರಿಸ್ಥಿತಿ ಬಲಿಷ್ಠವಾಗಿದೆ ಮತ್ತು ಇಡೀ ಜಗತ್ತು ನಮ್ಮ ಹಣಕಾಸಿನ ಕೊರತೆ ನಿರ್ವಹಣೆಯನ್ನು ಹೊಗಳುತ್ತಿದೆ. ನಮ್ಮ ವಿದೇಶೀ ವಿನಿಮಯ ಮೀಸಲು ಸಹ ಬಲಿಷ್ಠವಾಗಿದೆ" ಎಂದರು.

Nirmala Sitharaman
ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 95ಕ್ಕೆ ಕುಸಿದ ರೂಪಾಯಿ ಮೌಲ್ಯ!

"ಇತರ ಉದಯೋನ್ಮುಖ ಆರ್ಥಿಕತೆಗಳೊಂದಿಗೆ ಹೋಲಿಸಿದರೆ, ರೂಪಾಯಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ಮೌಲ್ಯ ಸಂಪೂರ್ಣವಾಗಿ ಉತ್ತಮವಾಗಿದೆ" ಎಂದರು.

ಸೀತಾರಾಮನ್ ನೀಡಿದ ಲಿಖಿತ ಉತ್ತರದಲ್ಲಿ, ರೂಪಾಯಿ ಅಪಮೌಲ್ಯೀಕರಣವು ಕೇವಲ INRಗೆ ಸೀಮಿತವಾಗಿಲ್ಲ. ಏಕೆಂದರೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ನಂತರ, ಏಷ್ಯಾದ ಪ್ರಮುಖ ಕರೆನ್ಸಿಗಳು ಸಹ ಅಪಮೌಲ್ಯಗೊಂಡಿವೆ ಎಂದರು.

ದಕ್ಷಿಣ ಕೊರಿಯಾದ ವೊನ್, ಥಾಯ್ ಬಹ್ತ್ ಮತ್ತು ಫಿಲಿಪೈನ್ ಪೆಸೊ ಮುಂತಾದ ಕೆಲವು ಕರೆನ್ಸಿಗಳು ರೂಪಾಯಿಗಿಂತ ಡಾಲರ್ ಎದುರು ಕ್ರಮವಾಗಿ ಶೇ 4.6, ಶೇ 5.5 ಮತ್ತು ಶೇ 4.8 ರಷ್ಟು ಕುಸಿದಿವೆ ಎಂದು ಅವರು ಹೇಳಿದರು.

"ಸರ್ಕಾರ ಮತ್ತು RBI ರೂಪಾಯಿ ಮೌಲ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ" ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com