

ಮುಂಬೈ: ವಾರದ ಮೊದಲ ದಿನವೇ ಕುಸಿತದ ಹಾದಿ ಹಿಡಿದು ಹೂಡಿಕೆದಾರರಿಗೆ ಶಾಕ್ ನೀಡಿದ್ದ ಭಾರತೀಯ ಷೇರುಮಾರುಕಟ್ಟೆ ದಿನದಾಂತ್ಯದಲ್ಲಿ ಅಲ್ಪ ಪ್ರಮಾಣದ ಚೇತರಿಕೆ ಕಂಡಿದೆ.
ಸೋಮವಾರ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.10ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.027ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಕೇವಲ77.05 ಅಂಕಗಳ ಏರಿಕೆಯೊಂದಿಗೆ 75,315.04 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 6.45 ಅಂಕಗಳ ಏರಿಕೆಯೊಂದಿಗೆ 23,649.95 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಫಾರ್ಮಾ ಮತ್ತು ಹೆಲ್ತ್ ಕೇರ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ. ಅಂತೆಯೇ ಗ್ರಾಹಕ ಬಾಳಿಕ ವಸ್ತುಗಳು ಮತ್ತು ನಿಫ್ಟಿ ಪಿಎಸ್ ಯು ಬ್ಯಾಂಕ್ ಗಳ ಷೇರುಗಳು ನಷ್ಟ ಕಂಡಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಷೇರುಗಳು ಹೆಚ್ಚಿನ ಪ್ರಮಾಣ ಲಾಭಾಂಶ ಗಳಿಸಿದ್ದರೆ ಉಳಿದಂತೆ ಬಜಾಜ್ ಫೈನಾನ್ಸ್, ಸನ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್, ಹೆಚ್ ಸಿಎಲ್ ಟೆಕ್ನಾಲಜಿ ಮತ್ತು ಟಿಸಿಎಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ.
ಅಂತೆಯೇ ಟಾಟಾ ಸ್ಟೀಲ್, ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ, ಎಸ್ ಬಿಐ, ಎನ್ ಟಿಪಿಸಿ, ಮಾರುತಿ ಸುಜುಕಿ, ಟ್ರೆಂಟ್ ಮತ್ತು ಮಹಿಂದ್ರ ಅಂಡ್ ಮಹಿಂದ್ರ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ರೂಪಾಯಿ ಮೌಲ್ಯ 96.35ಕ್ಕೆ ಕುಸಿತ!
ಅಂತೆಯೇ ಅತ್ತ ಷೇರುಮಾರುಕಟ್ಟೆ ಬೆನ್ನಲ್ಲೇ ಇತ್ತ ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿದಿದ್ದು, ಅಮೆರಿಕನ್ ಡಾಲರ್ ಎದುರು ಇಂದು ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ ಕಂಡಿದೆ. ನಿನ್ನೆ ಪ್ರತೀ ಡಾಲರ್ ಗೆ 96.19 ರೂಗಳಷ್ಟಿದ್ದ ರೂಪಾಯಿ ಮೌಲ್ಯ ಇಂದು 96.39 ರೂಗೆ ಕುಸಿದಿದೆ.
ಕಚ್ಚಾತೈಲ ಬೆಲೆ ಏರಿಕೆ
ಇಲ್ಲದೆ ಇತ್ತ ಕಚ್ಚಾತೈಲ ಬೆಲೆಗಳೂ ಕೂಡ ಇಂದು ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, ಪ್ರತೀ ಬ್ಯಾರೆಲ್ ಕ್ರೂಡ್ ಆಯಿಲ್ ಬೆಲೆಯಲ್ಲಿ ಶೇ.0.65ರಷ್ಟು ಏರಿಕೆಯಾಗಿದೆ. ಪ್ರಸ್ತುತ ಪ್ರತೀ ಬ್ಯಾರಲ್ ಕಚ್ಚಾತೈಲ ಬೆಲೆ 109.97 ಡಾಲರ್ ಗೆ ಏರಿಕೆಯಾಗಿದೆ.
Advertisement