2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ: ಆರ್ ಟಿಐ ಗೆ ಮಾಹಿತಿ!ಕಳೆದ ಕೆಲ ತಿಂಗಳಿನಿಂದ ಎಟಿಎಂ ಗಳಲ್ಲಿ 2,000 ರು. ನೋಟುಗಳೇಕೆ ಸಿಗುತ್ತಿಲ್ಲ ಎಂದು ನೀವೇನಾದರೂ ಯೋಚಿಸುತ್ತಿದ್ದರೆ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ.
ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಮುಖೇಶ್ ಅಂಬಾನಿರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಫೋರ್ಬ್ಸ್ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಈ ವರ್ಷವೂ ಸತತ 12 ನೇ ಬಾರಿಗೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಈ ವರ್ಷ ಅವರ ಒಟ್ಟು ಆಸ್ತಿ ಮೌಲ್ಯ 51.4 ಶತಕೋಟಿ ಡಾಲರ್ಗೆ ಏರಿದೆ.
ಉತ್ಪಾದನ ವಲಯದ ಕಳಪೆ ಸಾಧನೆ: ಕೈಗಾರಿಕಾ ಉತ್ಪಾದನೆಯು ಆಗಸ್ಟ್ನಲ್ಲಿ ಶೇ. 1.1ರಷ್ಟು ಕುಸಿತಉತ್ಪಾದನೆ,ಕ್ಷೇತ್ರ, ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಕಳಪೆ ಸಾಧನೆಯಿಂದಾಗಿ ಆಗಸ್ಟ್ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇಕಡಾ 1.1 ರಷ್ಟು ಕುಸಿದಿದೆ
740 ಕೋಟಿ ರೂ. ವಂಚನೆ: ರಾನ್ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಬಂಧನ740 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಅತೀ ದೊಡ್ಡ ಔಷಧಿಗಳ ಮಾರಾಟ ಮತ್ತು ತಯಾರಿಕಾ ಕಂಪನಿ ರಾನ್ಬಾಕ್ಸಿ ಮಾಜಿ ಪ್ರವರ್ತಕ ಶಿವಿಂದರ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸಾಲ ಮರುಪಾವತಿ ಬಾಕಿ: ಸೀಪ್ಲೇನ್ ಜಪ್ತಿ ಮಾಡಿದ ಬ್ಯಾಂಕ್ ಅಧಿಕಾರಿಗಳುಇದೇ ಮೊದಲ ಬಾರಿಗೆ ಸಾಲ ಮರುಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದಕ್ಕೆ ಬ್ಯಾಂಕ್ ಅಧಿಕಾರಿಗಳು ಸಮುದ್ರ ವಿಮಾನ(ಸೀಪ್ಲೇನ್)ವನ್ನು ಜಪ್ತಿ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಎಸ್ ಬಿಐಯಿಂದ ಸಾಲದ ಮೇಲಿನ ಬಡ್ಡಿದರ ಇಳಿಕೆ; ನಾಳೆ ಜಾರಿಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ.ಎಂಸಿಎಲ್ ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಇಳಿಕೆ ಮಾಡಿರುವ ಎಸ್ ಬಿಐ ನಾಳೆಯಿಂದ ಜಾರಿಗೆ ಬರಲಿದೆ.
ಪ್ರಸಕ್ತ ವರ್ಷ ವಿಶ್ವದ ಆರ್ಥಿಕತೆ ಶೇ.90 ರಷ್ಟು ಕುಸಿತ: ಐಎಂಎಫ್ಪ್ರಸಕ್ತ ಹಣಕಾಸು ವರ್ಷದಲ್ಲಿ ವಿಶ್ವದ ಆರ್ಥಿಕತೆ ಶೇಕಡಾ 90ರಷ್ಟು ಕಡಿಮೆಯಾಗಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ನೂತನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಎಚ್ಚರಿಕೆ ನೀಡಿದ್ದಾರೆ.
ಪೆಟ್ರೋಲ್ ಬೆಲೆಯಲ್ಲಿ 1 ರೂ. ಇಳಿಕೆ, ಗಣನೀಯ ಪ್ರಮಾಣದಲ್ಲಿ ತಗ್ಗಿದ ಡೀಸೆಲ್ ದರಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯತ್ತ ಮುಖ ಮಾಡಿದ್ದು, ಈ ತಿಂಗಳಲ್ಲಿ ಪೆಟ್ರೋಲ್ ದರದಲ್ಲಿ 1 ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಹೆಚ್ ಎಸ್ ಬಿಸಿ ಬ್ಯಾಂಕಿನಿಂದ ಸದ್ಯದಲ್ಲಿಯೇ 10 ಸಾವಿರ ಸಿಬ್ಬಂದಿ ವಜಾ: ಇಂಗ್ಲಿಷ್ ದೈನಿಕ ವರದಿಹೆಚ್ ಎಸ್ ಬಿಸಿ ಬ್ಯಾಂಕಿಂಗ್ ಸಂಸ್ಥೆ 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡುಬಂದ ಹಿನ್ನಲೆಯಲ್ಲಿ, ಸಂಸ್ಥೆ ನಷ್ಟದತ್ತ ಸಾಗುತ್ತಿದೆ ಎಂದು ಈ ಕ್ರಮಕ್ಕೆ ಮುಂದಾಗಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
ಈ ಬಾರಿ ಪರಿಸರಸ್ನೇಹಿ ದೀಪಾವಳಿ! ಹಸಿರು ಪಟಾಕಿಗಳು ಮಾರುಕಟ್ಟೆಗೆ ಲಗ್ಗೆಶೇಕಡಾ 30 ರಷ್ಟು ಕಡಿಮೆ ಮಾಲಿನ್ಯದೊಂದಿಗೆ ಹಸಿರು ಪಟಾಕಿಗಳು ಈಗ ಮಾರುಕಟ್ಟೆ ಪ್ರವೇಶಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ಪ್ರಕಟಿಸಿದರು, ಪರಿಸರಕ್ಕೆ ಹಾನಿಯಾಗದಂತೆ ಜನರ ಭಾವನೆಗಳಿಗೂ ನೋವಾಗದಂತೆ ಈ ಉಪಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೆಚ್ಚೆಚ್ಚು ತೆರಿಗೆ ಸಂಗ್ರಹವಾದರೆ ತೆರಿಗೆ ಪ್ರಮಾಣ ಕಡಿತ: ನಿರ್ಮಲಾ ಸೀತಾರಾಮನ್ತೆರಿಗೆ ಸುಧಾರಣೆ ಇಂದಿನ ತುರ್ತು ಅಗತ್ಯವಾಗಿದೆ. ಜಿಎಸ್ಟಿ ಪದ್ಧತಿ ತಾಂತ್ರಿಕತೆಯನ್ನು ಅವಲಂಬಿಸಿದ್ದು, ಎರಡು ತೆರಿಗೆ ಹಾಗೂ ಇತರ ಹಲವು ತೆರಿಗೆ ಬದಲಿಗೆ ಒಂದೇ ತೆರಿಗೆ ನೀತಿಯನ್ನು ಇದು ಒಳಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವ್ಯವಹಾರ ಮುಚ್ಚಿಡಲು ಪಿಎಂಸಿ ಬ್ಯಾಂಕ್ ನಿಂದ ಬರೋಬ್ಬರಿ 21 ಸಾವಿರ ನಕಲಿ ಖಾತೆ ಸೃಷ್ಟಿ!ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ದೊಡ್ಡ ಮಟ್ಟದ ಅವ್ಯವಹಾರದಲ್ಲಿ ತೊಡಗಿದ್ದು ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.
ಸತತ 5ನೇ ಬಾರಿ ರೆಪೋ ದರ ಇಳಿಕೆ, ಮತ್ತೆ 25 ಮೂಲಾಂಕ ಕಡಿತ ಮಾಡಿದ ಆರ್ ಬಿಐದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸತತ ಐದನೇ ಬಾರಿ ರೆಪೋ ದರವನ್ನು ಇಳಿಕೆ ಮಾಡಿದ್ದು, ನಿರೀಕ್ಷೆಯಂತೇ ರೆಪೋ ದರದಲ್ಲಿ 25 ಮೂಲಾಂಕಗಳನ್ನು ಕಡಿತ ಮಾಡಿದೆ.
ಪ್ರತಿ ಕೆಜಿಗೆ ರೂ.30ಕ್ಕೆ ಕುಸಿದ ಈರುಳ್ಳಿ ಬೆಲೆ!ಬೆಲೆ ಏರಿಕೆ ನಿಯಂತ್ರಣಕ್ಕೆ ತರುವ ಸಲುವಾಗಿ ಕೇಂದ್ರ ಸರ್ಕಾರ ರಫ್ತು ನಿಷೇಧಿದ ಪರಿಣಾಮ ಈರುಳ್ಳಿ ದರ ಗುರುವಾರ ಕುಸಿತ ಕಂಡಿದೆ.
ದೀಪಾವಳಿ ಉಡುಗೊರೆ: ಜಿಯೋಫೋನ್ ಈಗ ಕೇವಲ ರೂ. 699ಕ್ಕೆಎಲ್ಲ ಭಾರತೀಯರ ಸಂಪೂರ್ಣ ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇಂದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!