ಗೋಏರ್ ದೀಪಾವಳಿ ಕೊಡುಗೆ: ಅಗ್ಗದ ದರದಲ್ಲಿ ವಿಮಾನಯಾನ!ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ಗೋಏರ್ ದೀಪಾವಳಿಯ ಪೂರ್ವದ 24 ಗಂಟೆಗಳ ಸೂಪರ್ ಉಳಿತಾಯ ಕೊಡುಗೆಯನ್ನು ಘೋಷಿಸಿದೆ.
ಬೆಂಗಳೂರಿನಲ್ಲಿ ಹಲವು ನೌಕರರಿಗೆ ಉದ್ಯೋಗವಿಲ್ಲ, ಸಂಬಳ ಕಡಿತ; ಇದು ಆರ್ಥಿಕ ಕುಸಿತದ ಹೊಡೆತ!ಆರ್ಥಿಕ ಕುಸಿತ ಕೇವಲ ದೊಡ್ಡ ದೊಡ್ಡ ಉದ್ಯಮ ಮತ್ತು ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ಮತ್ತು ಸಣ್ಣ ಗಾತ್ರದ ಕೈಗಾರಿಕೆಗಳಲ್ಲಿ, ಕಂಪೆನಿಗಳಲ್ಲಿ ಉದ್ಯೋಗಿಗಳನ್ನು ಬೃಹತ್ ಸಂಖ್ಯೆಯಲ್ಲಿ ಕೆಲಸದಿಂದ ತೆಗೆದುಹಾಕುವ ಅಥವಾ ಅವರ ವೇತನದಲ್ಲಿ ಶೇಕಡಾ 30ರಷ್ಟು ಕಡಿತ ಮಾಡುವ ಮೂಲಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ.
ಮನಮೋಹನ್ ಸಿಂಗ್-ರಘುರಾಮನ್ ರಾಜನ್ ಅವಧಿಯಲ್ಲಿ ಬ್ಯಾಂಕುಗಳು ದುಸ್ಥಿತಿಗೆ ತಲುಪಿದ್ದವು: ನಿರ್ಮಲಾ ಸೀತಾರಾಮನ್ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಮತ್ತು ಆರ್ ಬಿಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರ ಅವಧಿಯಲ್ಲಿ ಭಾರತದ ಸಾರ್ವಜನಿಕ ವಲಯ ಬ್ಯಾಂಕುಗಳ ಸ್ಥಿತಿ ಅತ್ಯಂತ ಶೋಚನೀಯ ಹಂತಕ್ಕೆ ತಲುಪಿತ್ತು ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2019 ರ ಹಣಕಾಸು ವರ್ಷದಲ್ಲಿ ಪಾರ್ಲೇ ಬಿಸ್ಕೆಟ್ಸ್ ನಿವ್ವಳ ಲಾಭ ಶೇ.15 ರಷ್ಟು ಏರಿಕೆ!ಖಾಸಗಿ ಒಡೆತನದ ಪಾರ್ಲೇ ಬಿಸ್ಕೆಟ್ಸ್ ಸಂಸ್ಥೆಯ ನಿವ್ವಳ ಲಾಭ ವರ್ಷದಿಂದ-ವರ್ಷದ ಆಧಾರದಲ್ಲಿ 2018-2019 ನೇ ಹಣಕಾಸು ವರ್ಷದಲ್ಲಿ ಶೇ.15 ರಷ್ಟು ಏರಿಕೆಯಾಗಿದೆ.
4ಜಿ ಸೇವೆ ಪ್ರಾರಂಭಕ್ಕೆ ಬಿಎಸ್ಎನ್ಎಲ್ ಸಿದ್ದತೆ, ಶೀಘ್ರದಲ್ಲೇ ಗ್ರಾಹಕರಿಗೆ ವೀಡಿಯೊ ಕರೆ ಸೌಲಭ್ಯತನ್ನ ಪ್ರತಿಸ್ಪರ್ಧಿ ಸಂಸ್ಥೆಗಲಾದ ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಗಳಿಂದ ಗ್ರಾಹಕರನ್ನು ಪುನಃ ತನ್ನತ್ತ ಸೆಳೆದುಕೊಳ್ಳಲು ಬಿಎಸ್ಎನ್ಎಲ್ ಮುಂದಾಗಿದ್ದು ಈ ನಿಟ್ಟಿನಲ್ಲಿ ’ತನ್ನ 4ಜಿ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ.
ಸ್ಟಾರ್ಟ್ ಅಪ್ ಆರಂಭಿಸುವ ಆಸೆಯಿದೆಯೇ, ನಿಮಗೆ ಆಸರೆಯಾಗಿ ನಿಲ್ಲುತ್ತಾರೆ ರತನ್ ಟಾಟಾನಿಮ್ಮಲ್ಲಿ ಉತ್ತಮ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸುವ ಆಲೋಚನೆಯಿದೆಯೇ? ಆದರೆ ನಿಮ್ಮಲ್ಲಿ ಬಂಡವಾಳ ಕೊರತೆಯಿದೆಯೇ? ಚಿಂತೆ ಬೇಡ, ನಿಮ್ಮ ಆಸೆಗೆ ಆಸರೆಯಾಗಲಿದ್ದಾರೆ ಖ್ಯಾತ ಉದ್ಯಮಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ರತನ್ ಟಾಟಾ.
ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ವಿತ್ತೀಯ ನೀತಿ ಬಗ್ಗೆ ಚಿಂತಿಸಿ ಸಮಯ ಹಾಳು ಮಾಡಬೇಡಿ: ಅಭಿಜಿತ್ ಬ್ಯಾನರ್ಜಿಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಹಿಂದಿನಿಂದಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸುತ್ತಲೇ ಬಂದಿದ್ದಾರೆ.
ದೇಶದಲ್ಲಿ 2000 ರೂ. ನೋಟುಗಳ ಮುದ್ರಣ ಸ್ಥಗಿತ- ಆರ್ಬಿಐದೇಶಿಯ ಕರೆನ್ಸಿಯಲ್ಲಿ ಹೆಚ್ಚಿನ ಮೌಲ್ಯಹೊಂದಿರುವ 2 ಸಾವಿರ ರೂಪಾಯಿ ನೋಟು ಮುದ್ರಿಸುವುದನ್ನು ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿದೆ.
2019ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.1ಕ್ಕೆ ಕುಸಿಯಲಿದೆ: ಐಎಂಎಫ್ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮಂಗಳವಾರ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಮತ್ತೆ ಪರಿಸ್ಕರಿಸಿದ್ದು, 2019ರಲ್ಲಿ ಜಿಡಿಪಿ ಶೇ.6.1ಕ್ಕೆ ಕುಸಿಯಲಿದೆ ಎಂದು ಹೇಳಿದೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಮೇಲಿನ ನಿರ್ಬಂಧ ಸಡಲಿಸಿದ ಆರ್.ಬಿ.ಐಅಕ್ರಮ ಹಣಕಾಸು ವಹಿವಾಟು ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿ. (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಲ್ಪ ಪ್ರಮಾಣದಲ್ಲಿ ನಿರ್ಬಂಧ ಸಡಲಿಸಿದೆ.
ನಿಯಮ ಉಲ್ಲಂಘನೆ: ಲಕ್ಷ್ಮೀ ವಿಲಾಸ್, ಸಿಂಡಿಕೇಟ್ ಬ್ಯಾಂಕ್ ಗಳಿಗೆ ಆರ್ ಬಿಐ ದಂಡಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯವಹಾರ ನಡೆಸಿದ ಹಿನ್ನಲೆಯಲ್ಲಿ ಖಾಸಗಿ ಲಕ್ಷ್ಮೀ ನಿಲಾಸ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಗಳಿಗೆ ದುಬಾರಿ ದಂಡ ವಿಧಿಸಲಾಗಿದೆ.
ಅಮೆಜಾನ್ ನಿಂದ ಆಹಾರ ಪೂರೈಕೆ ಆಪ್ ಆರಂಭ? ಸ್ವಿಗ್ಗಿ, ಝೊಮ್ಯಾಟೊಗೆ ಸೆಡ್ಡುಈ ದೀಪಾವಳಿಗೆ ಆನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಆಹಾರ ಪೂರೈಸುವ ಆಪ್ ನ್ನು ಆರಂಭಿಸುವ ಯೋಜನೆಯಲ್ಲಿದೆ.
ಕೊಡುಗೈ ದಾನಿಗಳಲ್ಲಿ ಎಚ್ ಸಿಎಲ್ ನಾಡರ್ ಪ್ರಥಮ,ಮುಖೇಶ್ ಮೂರನೇ ಸ್ಥಾನ!ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾಗಿದ್ದರೂ, ಕೊಡುಗೈ ದಾನಿಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೆಚ್ ಸಿಎಲ್ ತಂತ್ರಜ್ಞಾನ ಸಂಸ್ಥೆಯ ಶಿವ್ ನಾಡರ್ ಅಗ್ರಸ್ಥಾನದಲ್ಲಿದ್ದಾರೆ.
ಷೇರುಮಾರುಕಟ್ಟೆ ಐಆರ್ ಸಿಟಿಸಿ ಭರ್ಜರಿ ಎಂಟ್ರಿ: ಮೊದಲ ವಹಿವಾಟಿನಲ್ಲೇ ವಿತರಣಾ ಬೆಲೆಗಿಂತ ದುಪ್ಪಟ್ಟು ಗಳಿಕೆ!ಷೇರುಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವಹಿವಾಟಿನಲ್ಲೇ ಐಆರ್ ಸಿಟಿಸಿಯ ಷೇರುಗಳ ಬೆಲೆ ಶೇ.101 ರಷ್ಟು ಏರಿಕೆ ಕಂಡಿದೆ.
ಸಗಟು ಮಾರುಕಟ್ಟೆ: ಹಣದುಬ್ಬರ ಪ್ರಮಾಣ ಶೇ.0.33ಕ್ಕೆ ಇಳಿಕೆಸಗಟು ಬೆಲೆ ಆಧಾರಿತ ಹಣದುಬ್ಬರವು ಸೆಪ್ಟೆಂಬರ್ನಲ್ಲಿ ಶೇಕಡಾ 0.33 ಕ್ಕೆ ಇಳಿದಿದೆ, ಆಹಾರೇತರ ಉತ್ಪನ್ನಗಳ ಬೆಲೆ ಕುಸಿತದಿಂದಾಗಿ ಹಣದುಬ್ಬರ ಪ್ರಮಾಣ ಕುಸಿದಿದೆ. ಆಗಸ್ಟ್ನಲ್ಲಿ ಇದು 1.08 ರಷ್ಟಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸಿದೆ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!