ಪರೀಕ್ಷೆಯಿಲ್ಲದೆ ಆರ್‌ಬಿಐನಲ್ಲಿ ಫಾರ್ಮಾಸಿಸ್ಟ್ ಹುದ್ದೆ: ಗಂಟೆಗೆ 600 ರೂ ಸಂಭಾವನೆ, ಅರ್ಜಿ ಸಲ್ಲಿಕೆ ಹೇಗೆ?

ಭಾರತೀಯ ರಿಸರ್ವ್ ಬ್ಯಾಂಕ್ ಮುಂಬೈನಲ್ಲಿರುವ ತನ್ನ ವಿವಿಧ ಡಿಸ್ಪೆನ್ಸರಿಗಳಲ್ಲಿ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸಲು ಫಾರ್ಮಾಸಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
RBI
ಆರ್ ಬಿಐonline desk
Updated on: 

RBI Pharmacist Recruitment 2026: ಭಾರತೀಯ ರಿಸರ್ವ್ ಬ್ಯಾಂಕ್ ಮುಂಬೈನಲ್ಲಿರುವ ತನ್ನ ವಿವಿಧ ಡಿಸ್ಪೆನ್ಸರಿಗಳಲ್ಲಿ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸಲು ಫಾರ್ಮಾಸಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ನೇಮಕಾತಿಯು ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲೆ ನಡೆಯಲಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆ ವಿವರ:

  • ಸಂಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ (RBI)

  • ಹುದ್ದೆಯ ಹೆಸರು: ಫಾರ್ಮಸಿಸ್ಟ್ (ಗುತ್ತಿಗೆ ಆಧಾರದ ಮೇಲೆ)

  • ಒಟ್ಟು ಹುದ್ದೆಗಳ ಸಂಖ್ಯೆ: 22 ಹುದ್ದೆಗಳು

  • ಉದ್ಯೋಗದ ಸ್ಥಳ: ಮುಂಬೈ ಮತ್ತು ನವಿ ಮುಂಬೈ (ಆನ್-ಸೈಟ್)

  • ಉದ್ಯೋಗದ ಅವಧಿ: 240 ದಿನಗಳ ಗುತ್ತಿಗೆ ಅವಧಿ

ಅರ್ಹತೆ:

  • ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ (ಮೆಟ್ರಿಕ್ಯುಲೇಶನ್) ಜೊತೆಗೆ ಫಾರ್ಮಸಿಯಲ್ಲಿ ಡಿಪ್ಲೊಮಾ ಅಥವಾ ಫಾರ್ಮಸಿ ಪದವಿ ಮುಗಿಸಿರಬೇಕು.

  • ಅನುಭವ: ಫಾರ್ಮಾಸಿಸ್ಟ್ ಆಗಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. (ಸರ್ಕಾರಿ ಸಂಸ್ಥೆಗಳು ಅಥವಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುವುದು). ಇದರೊಂದಿಗೆ ಕಂಪ್ಯೂಟರ್‌ನ ಮೂಲಭೂತ ಜ್ಞಾನ ಅಗತ್ಯ.

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ಗಂಟೆಗೆ ₹600 ಗೌರವಧನ ನೀಡಲಾಗುತ್ತದೆ. ಅದರಂತೆ, ದಿನಕ್ಕೆ ಗರಿಷ್ಠ 5 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶವಿದ್ದು, ದಿನವೊಂದಕ್ಕೆ ಗರಿಷ್ಠ ₹3,000 ವರೆಗೆ ಗಳಿಸಬಹುದು. ಇದನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಭತ್ಯೆಗಳು ಅಥವಾ ಇತರೆ ಸೌಲಭ್ಯಗಳು ಇರುವುದಿಲ್ಲ.

RBI
ಕೇಂದ್ರ ತನಿಖಾ ಸಂಸ್ಥೆಯಲ್ಲಿ ಬಂಪರ್ ಉದ್ಯೋಗಾವಕಾಶ: ಪರೀಕ್ಷೆಯಿಲ್ಲದೆ ನೇಮಕಾತಿ, ತಿಂಗಳಿಗೆ ಬರೋಬ್ಬರಿ ₹1.50 ಲಕ್ಷ ಸಂಬಳ!

ಅರ್ಜಿ ಸಲ್ಲಿಸುವ ವಿಧಾನ:

ಇದು ಆಫ್‌ಲೈನ್ ಹಾಗೂ ಆನ್‌ಲೈನ್ ಲಿಂಕ್ ಮೂಲಕ ವಿವರ ಸಲ್ಲಿಸುವ ಜಂಟಿ ಪ್ರಕ್ರಿಯೆಯಾಗಿದೆ:

  1. ಮೊದಲು ಆರ್‌ಬಿಐ ಅಧಿಕೃತ ವೆಬ್‌ಸೈಟ್‌ Reserve Bank of India ಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು (Annex-I) ಡೌನ್‌ಲೋಡ್ ಮಾಡಿಕೊಳ್ಳಬೇಕು.

  2. ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ಎಲ್ಲಾ ಅಗತ್ಯ ಶೈಕ್ಷಣಿಕ ದಾಖಲೆಗಳು, ಅನುಭವದ ಪತ್ರ, ವಯಸ್ಸಿನ ಪುರಾವೆ ಮತ್ತು ಜಾತಿ ಪ್ರಮಾಣಪತ್ರಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು.

  3. ಲಕೋಟೆಯ ಮೇಲೆ "Application for the post of Pharmacist on contract basis with fixed hourly remuneration, Mumbai" ಎಂದು ಬರೆದು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕು.

  • ಅರ್ಜಿ ಸಲ್ಲಿಸಬೇಕಾದ ವಿಳಾಸ:

    • Regional Director, Human Resource Management Department,
      Recruitment Section, Reserve Bank of India,
      Mumbai Regional Office, Shahid Bhagat Singh Road,
      Fort, Mumbai – 400001.

    ಇದರೊಂದಿಗೆ ಅಧಿಕೃತ ಪ್ರಕಟಣೆಯಲ್ಲಿ ನೀಡಲಾಗಿರುವ ಆನ್‌ಲೈನ್ ಲಿಂಕ್ ಮೂಲಕವೂ ತಮ್ಮ ವಿವರಗಳನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

    • ನವೆಂಬರ್ 3, 2026ರ ಸಂಜೆ 5:00 ಗಂಟೆಯೊಳಗೆ ಅರ್ಜಿಗಳು ಕಚೇರಿ ತಲುಪಬೇಕು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com