

ಹೆಣ್ಣು ಮಕ್ಕಳು ಇನ್ನುಮುಂದೆ ಧೈರ್ಯವಾಗಿ ಬೆನ್ನು ತೋರಿಸಬಹುದು! ಯಾರು ಏನು ಅಂದುಕೊಳ್ಳುತ್ತಾರೆ ಎಂದು ಹೆದರಬೇಕಾಗಿಲ್ಲ. ಅದು ಅರೆನಗ್ನತೆಯೂ ಅಲ್ಲ. ಹಾಗಂತ ಹೇಳ್ತಿರೋದು ನಟಿ ಅನುಷ್ಕಾ ಶರ್ಮ.
ಅವಳ ಪ್ರಕಾರ ತೆರೆದ ಬೆನ್ನು ತೋರಿಸುವುದು ಎಂದರೆ ಆತ್ಮವಿಶ್ವಾಸದ ಪ್ರತೀಕ! ಫ್ಯಾಷನ್‌ನಲ್ಲಾಗಲೀ, ಸಾಂಪ್ರದಾಯಿಕ ಉಡುಗೆಯಲ್ಲಾಗಲೀ, ಹೆಣ್ಣು ಮಗಳು ಬೆನ್ನಿನ ಭಾಗವನ್ನು ಜಾಸ್ತಿ ತೋರಿಸುತ್ತಾಳೆ ಎಂದಾದರೆ ಆಕೆ ದಿಟ್ಟೆ ಎಂದು ಅರ್ಥವಂತೆ. ಅನುಷ್ಕಾಗೆ ಕೂಡ ಬರಿ ಬೆನ್ನು ತೋರಿಸುವುದು ಇಷ್ಟವಂತೆ.
'ನನ್ನಲ್ಲಿ ಆತ್ಮವಿಶ್ವಾಸವಿದೆ ಎನ್ನುವುದನ್ನು ಅನುಷ್ಕಾ ಹೀಗೆ ಹೇಳಬೇಕಿರಲಿಲ್ಲ' ಎಂದು ಕೆಲವರು ಕಟಕಿಯಾಡಿದ್ದು ಮಾತ್ರ ಅವಳ ಕಿವಿಗೆ ಬಿದ್ದಿಲ್ಲವಂತೆ.