

ಕಿಸ್ಸಿಂಗ್ ಚತುರೆ, ಪಾಕಿಸ್ತಾನಿ ನಟಿ ಮೀರಾಗೆ ಅದೇಕೊ ವಿವಾದಗಳು ಬೇಡವೆಂದರೂ ಸುತ್ತಿಕೊಳ್ಳುತ್ತಿವೆ. ಬಿಡುಗಡೆಗೆ ಸಿದ್ಧವಾಗಿರುವ 'ಭದಾಸ್' ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಅಜಯ್ ಯಾದವ್ ಅವರು ಮೀರಾ ವಿರುದ್ಧ ಅಸಹಕಾರದ ದೂರು ನೀಡಿದ್ದಾರೆ ಎನ್ನುವ ವರ್ತಮಾನವಿದೆ. ಚುಂಬನ ದೃಶ್ಯ ಮತ್ತು ಮೇಕಪ್ ಬಗ್ಗೆ ಅತಿಯಾದ ಕಾಳಜಿ ತೋರುತ್ತಿದ್ದ ಮೀರಾ, ಚಿತ್ರದ ಡಬ್ಬಿಂಗ್‌ನಲ್ಲಿ ಭಾಗವಹಿಸಿಲ್ಲ ಎನ್ನುವುದು ನಿರ್ಮಾಪಕರ ದೂರು. 'ನಾನು ಮೇ ತಿಂಗಳಲ್ಲಿ ಭಾರತದಲ್ಲಿ ಇರುವುದಿಲ್ಲ ಎಂದು ಮೊದಲೇ ತಿಳಿಸಿದ್ದೆ. ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ನೋವು ತಂದಿದೆ. ನಿರ್ಮಾಪಕರ ಜತೆ ಮಾತನಾಡಿ ದೂರು ವಾಪಸ್ ಪಡೆಯುವಂತೆ ಮನ ಒಲಿಸುತ್ತೇನೆ' ಎಂದಿದ್ದಾಳೆ ಮೀರಾ.
2005ರಲ್ಲಿ ತೆರೆಕಂಡ 'ನಝರ್' ಮೂಲಕ ಬಾಲಿವುಡ್‌ಗೆ ಬಂದ ಮೀರಾಗೆ ವಿವಾದಗಳನ್ನು ಹೇಗೆ ಇತ್ಯರ್ಥಪಡಿಸಿಕೊಳ್ಳಬೇಕು ಎನ್ನುವುದು ಚೆನ್ನಾಗಿ ಗೊತ್ತಿರುವಂತಿದೆ ಎನ್ನುವ ಗುಸುಗುಸು ಬಿ ಟೌನ್‌ನಲ್ಲಿ ಜೋರಾಗಿಯೇ ಹರಿದಾಡುತ್ತಿದೆ