ಹಾಲಿವುಡ್‍ಗೆ ಹೋಗಲು ಏಜೆಂಟರ ನೆರವು ಬೇಕಾ?

ಇರ್ಫಾನ್ ಖಾನ್ ಹಾಲಿವುಡ್ಡನ್ನು ನಮಗೆ ಇನ್ನಷ್ಟು ಹತ್ತಿರವಾಸಿದ ಹೆಸರು, ಲೈಫ್ ಆಫ್ ಪೈ, ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, ಜುರಾಸ್ಸಿಕ್ ವರ್ಲ್ಡ್ ಮೂಲಕ ಪಾಶ್ಚಾತ್ಯ ಸಿನಿಲೋಕದಲ್ಲಿ ಬೇಡಿಕೆ ಸೃಷ್ಟಿಸಿಕೊಂಡ ಇರ್ಫಾನ್, ಏಜೆಂಟ್ ಗಳ...
ಹಾಲಿವುಡ್ ನಟ ಇರ್ಫಾನ್ ಖಾನ್
ಹಾಲಿವುಡ್ ನಟ ಇರ್ಫಾನ್ ಖಾನ್

ಇರ್ಫಾನ್ ಖಾನ್ ಹಾಲಿವುಡ್ಡನ್ನು ನಮಗೆ ಇನ್ನಷ್ಟು ಹತ್ತಿರವಾಸಿದ ಹೆಸರು, ಲೈಫ್ ಆಫ್ ಪೈ, ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, ಜುರಾಸ್ಸಿಕ್ ವರ್ಲ್ಡ್ ಮೂಲಕ ಪಾಶ್ಚಾತ್ಯ ಸಿನಿಲೋಕದಲ್ಲಿ ಬೇಡಿಕೆ ಸೃಷ್ಟಿಸಿಕೊಂಡ ಇರ್ಫಾನ್, ಏಜೆಂಟ್ ಗಳ ಮೂಲಕ ಹಾಲಿವುಡ್ ಗೆ ಕಾಲಿಟ್ಟರಾ? ಹೀಗೆ ಶಂಕೆ ಹುಟ್ಟಿಹಾಕಿದ್ದು ಅವರದ್ದೇ ಮಾತು.

ಹಾಲಿವುಡ್ ನಲ್ಲಿ ಏಜೆಂಟ್ ಗಳಿಲ್ಲದೆ ನಟಿಸೋದಿಕ್ಕಾಗಲ್ಲ. ನಿಮಗೊಂದು ಫೋನ್ ಬರುತ್ತೆ, ನಂತರ ಫಿಲ್ಮ್ ಮೇಕರ್ ಗಳು ನಿಮ್ಮನ್ನು ಸ್ವಾಗತಿಸುತ್ತಾರೆ ಎಂಬ ಇಲ್ಲಿನಂತೆ ಸಿಸ್ಟಂ ಅಲ್ಲಿಲ್ಲ. ನೀವು ಏಜೆಂಟ್ ಗಳ ಸಿಸ್ಟಮ್ಮಿನ ಒಂದು ಭಾಗವಷ್ಟೇ. ಆದರೆ, ಏಜೆಂಟ್ ಗಳು ನಿಮ್ಮ ಪರ ಕೆಲಸ ಮಾಡಲ್ಲ. ಅವರು ಕೇವಲ ಮೀಡಿಯೇಟರ್. ಸುಮ್ಮಸುಮ್ಮನೆ ಹಣ ಕಿತ್ತು, ಸುಲಿಗೆ ಮಾಡುವ ಸಂಸ್ಕೃತಿ ಅಲ್ಲಿಲ್ಲ ಎಂಬುದು ಖಾನ್ ಕಂಡುಕೊಂಡ ಸತ್ಯ. ನಟನೆಯ ಕಲೆ ಇದ್ದರಷ್ಟೇ ಅಲ್ಲಿ ಆಳಲು ಸಾಧ್ಯ. ಇಲ್ಲದಿದ್ದರೆ ಯಾವ ಅವಕಾಶಗಳಿಗೂ ಅಲ್ಲಿ ಪ್ರಭಾವ ನಡೆಯಲ್ಲ ಅನ್ನೋದು ಇರ್ಫಾನ್ ನ ಅಂತರಂಗದ ಮಾತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com