ಬಾಲಕಿಗೆ ಬೆದರಿಕೆ: ಗಾಯಕ ರೆಮೋ ವಿರುದ್ಧ ಪ್ರಕರಣ ದಾಖಲು

ಪುತ್ರ ಜೊನಾಥ್ ಕಾರು ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ ಆರೋಪ ಗಾಯಕ ರೆಮೋ...
ರೆಮೋ ಫರ್ನಾಂಡಿಸ್
ರೆಮೋ ಫರ್ನಾಂಡಿಸ್

ಪಣಜಿ: ಪುತ್ರ ಜೊನಾಥ್ ಕಾರು ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ ಆರೋಪ ಗಾಯಕ ರೆಮೋ ಫರ್ನಾಂಡೀಸ್​ ವಿರುದ್ಧ ದಾಖಲಾಗಿದೆ.

ಬಾಲಕಿ ಹೇಳಿಕೆಯನ್ನು ಆಧರಿಸಿ 62 ವರ್ಷ ವಯಸ್ಸಿನ ಗಾಯಕ ರೆಮೋ ವಿರುದ್ಧ ಗೋವಾದ ಅಗಸೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಡಿಸೆಂಬರ್ 3ರಂದು ಗೋವಾ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಆವರಣದ ವಾರ್ಡ್ 105ರಲ್ಲಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಇನ್ಸ್​ಪೆಕ್ಟರ್ ಜಿವ್ಬಾ ದಾಲ್ವಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಲ್ವಾನ್ ಮೂಲದ ಬಾಲಕಿ ಡಿಸೆಂಬರ್ 2ರಂದು ಹಳೇ ಗೋವಾದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಕಡೆಗೆ ನಡೆದು ಹೋಗುವಾಗ ರೆಮೋ ಪುತ್ರ ಜೊನಾಥ್ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಜೊನಾಥ್ ತುಂಬಾ ವೇಗವಾಗಿ ಕಾರು ಚಲಿಸುತ್ತಿದ್ದರು. ಬಾಲಕಿಯ ಹೇಳಿಕೆಯನ್ನಾಧರಿಸಿ ಜೊನಾಥ್​ಗೆ ಸಮನ್ಸ್ ನೀಡಲಾಗಿತ್ತು. ಅವರ ವಿರುದ್ಧ ಅತಿ ವೇಗ, ಬೇಜವಾಬ್ದಾರಿ ಚಾಲನೆ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com