ಮೋಟ್ವಾನಿಯ ಹೊಸ ವರಸೆ

ಹನ್ಸಿಕಾ ಮೋಟ್ವಾನಿ ತನ್ನ ಹೆಸರಿಗೆ ಈಗ ನ್ಯಾಯ ಒದಗಿಸುತ್ತಿಲ್ಲ ಎಂಬುದು ಆಕೆ ಸಣ್ಣಗಾಗಿರುವುದಕ್ಕೆ...
ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಮೋಟ್ವಾನಿ ತನ್ನ ಹೆಸರಿಗೆ ಈಗ ನ್ಯಾಯ ಒದಗಿಸುತ್ತಿಲ್ಲ ಎಂಬುದು ಆಕೆ ಸಣ್ಣಗಾಗಿರುವುದಕ್ಕೆ ಅಭಿಮಾನಿಗಳು ಮಾಡುತ್ತಿರುವ ಕಂಪ್ಲೇಂಟು. ಅದೇ ಕಾರಣಕ್ಕೆ ಆಕೆಯ ಹೊಸ ತಮಿಳು ಚಿತ್ರ 'ಆಂಬಲ'ಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲವೆಂದೂ ಕೆಲವರು ಹೇಳುತ್ತಿದ್ದಾರೆ.

ತಮಿಳಲ್ಲಿ ಕತ್ತಿ ಸಿನಿಮಾ ವಿಜಯಿಯಾಯ್ತು ಅಂತ ಕತ್ತಿವರಸೆ ಇರೋ ಸಿನಿಮಾಗಳೆಲ್ಲ ಹಿಟ್ ಆಗೋಕೆ ಸಾಧ್ಯವಾ? ವಿಶಾಲ್ ಅಭಿನಯದ ಹನ್ಸಿಕಾ ನಾಯಕಿಯಾಗಿರುವ ಈ ಆ್ಯಕ್ಷನ್ ಡ್ರಾಮಾ ತಮಿಳುನಾಡಿನಾದ್ಯಂತ ಭಾರೀ ನೀರಸ ಕಲೆಕ್ಷನ್ ಮಾಡಿದೆ.

ಪಾಪ... ಹನ್ಸಿಕಾ ಈ ಚಿತ್ರದ ತನ್ನ ರಾಜಕುಮಾರಿ ಪಾತ್ರಕ್ಕೋಸ್ಕರ ಕತ್ತಿ ವರಸೆ, ಕುದುರೆಸವಾರಿ ಏನೇನೇನೋ ಕಲಿತದ್ದೆಲ್ಲಾ ವೇಸ್ಟ್ ಆಗಿದೆ. ರಿಯಲ್ ಖಡ್ಗ ಹಿಡಿದು ಹಾಂಕ್ ಕಾಂಗ್ ಗುರು ಬಳಿ ಪ್ರಾಕ್ಟೀಸೆಲ್ಲ ಮಾಡಿದ್ದ ಹನ್ಸಿಕಾ ಆಸ್ಪತ್ರೆ ಸೇರೋ ಲೆವೆಲ್ಲಿಗೆ ಮೈಕೈ ನೋಯಿಸಿಕೊಂಡಿದ್ದಳು.

ಇಷ್ಟೆಲ್ಲಾ ಮಾಡಿಯೂ ಸಿನಿಮಾ ಫ್ಲಾಪ್ ಆಗಿರೋದ್ರಿಂದ ಬೇಜಾರಾಗಿರೋ ಹನ್ಸಿಕಾ, ಇನ್ಮೇಲೆ ರೊಮ್ಯಾನ್ಸು ಡ್ಯಾನ್ಸು ಬಿಟ್ಟು ಬೇರೇನೂ ಮಾಡಲ್ಲ ಅಂಥ ಶಪಥ ಮಾಡಿದ್ದಾಳಂತೆ.

ಹಾಗೆಯೇ ತನ್ನ ಅಭಿಮಾನಿಗಳಿಗೋಸ್ಕರ ತೂಕ ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದಾಳಂತೆ. ಹಾಗಾದ್ರೆ ಆಕೆಯ ಮುಂದಿನ ಸಿನಿಮಾಗಳ ಹೀರೊ ಕಥೆ ಅಷ್ಟೆ ಅಂತೀರಾ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com