ದಿಲ್ ಧಡ್ಕನೇ ದೋ ಚಿತ್ರ ನೋಡಿ ಟರ್ಕಿ ಸೌಂದರ್ಯಕ್ಕೆ ಮರುಳಾದ ಆಮೀರ್

ಕಳೆದ ಶುಕ್ರವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ ನ ದಿಲ್ ಧಡ್ಕನೇ ದೋ ಚಿತ್ರವನ್ನು ಎರಡು ಬಾರಿ ನೋಡಿರುವ ಖ್ಯಾತ ಬಾಲಿವುಡ್...
ಆಮೀರ್ ಖಾನ್
ಆಮೀರ್ ಖಾನ್
Updated on: 

ಕಳೆದ ಶುಕ್ರವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬಾಲಿವುಡ್ ನ ದಿಲ್ ಧಡ್ಕನೇ ದೋ ಚಿತ್ರವನ್ನು ಎರಡು ಬಾರಿ ನೋಡಿರುವ ಖ್ಯಾತ ಬಾಲಿವುಡ್ ನಟ  ಆಮೀರ್ ಖಾನ್ ಟರ್ಕಿ ದೇಶದ ಸೌಂದರ್ಯಕ್ಕೆ ಮಾರು ಹೋಗಿದ್ದಾರಂತೆ.

ಮಿಸ್ಟರ್ ಪರ್ಫಕ್ಷನೆಸ್ಟ್ ಎಂದೇ ಕರೆಸಿಕೊಳ್ಳುವ  ಅಮೀರ್ ಖಾನ್  ಜೋಯಾ ಅಖ್ತರ್ ನಿರ್ದೇಶನದ 'ದಿಲ್ ಧಡ್ಕನೇ ದೋ' ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರ ಬಿಡುಗಡೆ ಬಳಿಕ ಎರಡು ಬಾರಿ ವಿಕ್ಷೀಸಿರುವ ಅಮೀರ್ ಚಿತ್ರ ಕಥೆಗೆ ಮನ ಸೋತಿದ್ದು, ಆಮೀರ್ ಖಾನ್  ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಮನಸಾರೆ ಹೊಗಳಿದ್ದಾರೆ. ಅಲ್ಲದೇ ಟರ್ಕಿಯ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದ್ದು, ಟರ್ಕಿ ಸೌಂದರ್ಯಕ್ಕೆ ಮಾರುಹೋಗಿರುವ ಆಮೀರ್ ಅಲ್ಲಿಗೆ ತೆರಳುವುದಾಗಿಯೂ ಘೋಷಿಸಿದ್ದಾರೆ.

ಬಾಲಿವುಡ್ ನ ಖ್ಯಾತ ನಾಮರಾದ ಫರ್ಹಾನ್ ಅಖ್ತರ್, ಅನಿಲ್ ಕಪೂರ್, ರಣವೀರ್ ಸಿಂಗ್, ಅನುಷ್ಕಾ ಶರ್ಮಾ, ಪ್ರಿಯಾಂಕಾ ಛೋಪ್ರಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಕುರಿತು ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಕಳೆದ ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com