ತಮಾಷೆ ಕೇಳಿ: ಮರುದಿನ ಚಿತ್ರ ತಂಡದ ಉಳಿದವರೆಲ್ಲ ಹೇಳಿದ್ದ ಟೈಂಗೆ ಬಂದರು. ಆದರೆ ಆಮೀರ್ ಖಾನೇ ನಾಪತ್ತೆ! ನಿಯಮ ಅಂದಮೇಲೆ ಎಲ್ಲರಿಗೂ ಒಂದೇ ತಾನೆ? ಬಸ್ಸು, ಲಗಾನ್ ಚಿತ್ರದ ಹೀರೋನನ್ನೇ ಬಿಟ್ಟು ಹೋಗಿಬಿಟ್ಟಿತು. ಐದು ನಿಮಿಷದ ನಂತರ ಓಡೋಡಿ ಬಂದ ಅಮೀರ್ ಖಾನ್, ಪೆಚ್ಚು ಮೋರೆಯೊಂದಿಗೆ ಹೋಟೆಲ್‍ಗೆ ವಾಪಸ್ಸಾದ! ಆ ಕಡೆ, ಲಗಾನ್ ಚಿತ್ರದ ಮೊತ್ತ ಮೊದಲ ದಿನದ ಶೂಟಿಂಗು, ಹೀರೋ ಕಂ ನಿರ್ಮಾಪಕನೇ ಇಲ್ಲದಿದ್ದರೂ ನಿರಾತಂಕವಾಗಿ ಮುಂದುವರಿಯಿತು.