ಸನ್ನಿ ಲಿಯೋನ್
ಸನ್ನಿ ಲಿಯೋನ್

ಸಮೂಹ ಸನ್ನಿಗೊಳಗಾದ ಲಿಯೋನ್

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಿದ ಬಹು ನಿರೀಕ್ಷಿತ `ಕುಛ್ ಕುಛ್ ಲೋಚಾ ಹೈ' ತೋಪೆದ್ದು ಹೋಯಿತು. ಸನ್ನಿಯ ಕುರುಡಾಭಿಮಾನಿಗಳನ್ನು ಹೊರತುಪಡಿಸಿ, ಬೇರೆ ಯಾರೂ ಈ ಚಿತ್ರ ನೋಡುವ ಅಗತ್ಯವೇ ಇಲ್ಲ ಎಂದೇ ವಿಮರ್ಶಿಸಲಾಗಿದೆ...

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಿದ ಬಹು ನಿರೀಕ್ಷಿತ `ಕುಛ್ ಕುಛ್ ಲೋಚಾ ಹೈ' ತೋಪೆದ್ದು ಹೋಯಿತು. ಸನ್ನಿಯ ಅಂಧಾಭಿಮಾನಿಗಳನ್ನು ಹೊರತುಪಡಿಸಿ, ಬೇರೆ ಯಾರೂ ಈ ಚಿತ್ರ ನೋಡುವ ಅಗತ್ಯವೇ ಇಲ್ಲ ಎಂದೇ ವಿಮರ್ಶಿಸಲಾಗಿದೆ.

ಬ್ಯಾಚುಲರ್ ಗಣೇಶನ ದೇವಸ್ಥಾನಕ್ಕೆ ಹೋಗಿ `ಸಿನಿಮಾ ಹಿಟ್ ಆಗಲಿ' ಎಂದು ಬೇಡಿಕೊಂಡರೂ, ಯಾಕೋ ಯಶಸ್ಸು ಸನ್ನಿಯ ಕೈ ಹಿಡಿಯಲಿಲ್ಲ. ಹಾಗಂತ ಸುಮುಖ ಸನ್ನಿ ಕೈ ಬಿಟ್ಟಂತೆಯೂ ಕಾಣುತ್ತಿಲ್ಲ. ಸಮೂಹ ಸನ್ನಿಗೊಳಗಾದಂತೆ ಬಿ-ಟೌನ್‍ನ ಎಲ್ಲ ನಟಿಯರೂ ಬಯಸುವ ಸುಗಂಧ ದ್ರವ್ಯಗಳ ಪ್ರಚಾರಕ್ಕೆ ಸನ್ನಿಗೊಂದು ಸದವಕಾಶ ಸಿಕ್ಕಿದೆ.

ಇದಕ್ಕೆ ಅತೀವ ಖುಷಿಯಾಗಿದೆ ಎಂದು ಅವಳೇ ಟ್ವೀಟ್ ಮಾಡಿದ್ದಾಳೆ. ಜತೆಗೆ ಫ್ರಾನ್ಸ್ ಮತ್ತು ಸ್ವೀಡನ್‍ನ ಸಿಕ್ಕಾಪಟ್ಟೆ ಸುಗಂಧ ದ್ರವ್ಯಗಳ ಬಾಟಲಿಗಳನ್ನು ಮುಂದಿಟ್ಟುಕೊಂಡಿರುವ ಫೋಟೋವನ್ನೂ ಹಂಚಿಕೊಂಡಿದ್ದಾಳೆ.

Related Stories

No stories found.

Advertisement

X
Kannada Prabha
www.kannadaprabha.com