ಶಾಹೀದ್‍ಗೆ ಶೀಘ್ರವೇ ಕಲ್ಯಾಣ

ಉಡ್ತಾ ಪಂಜಾಬ್' ಚಿತ್ರದಲ್ಲಿ ನಟಿಸುತ್ತಿರುವ ಶಾಹೀದ್ ಕಪೂರ್ ಮತ್ತು ಅವನ ಒಂದು ಕಾಲದ ಗೆಳತಿ ಕರೀನಾ ಕಪೂರ್ ಅಮೃತಸರದಲ್ಲಿ ಒಂದೇ ಹೋಟೆಲ್‍ನಲ್ಲಿ ಉಳಿದುಕೊಳ್ತಾರೆ ಎಂಬ ಸುದ್ದಿ ಇತ್ತು. ಹೌದಾ? ಏಕೆ? ಏನು? ಎಂಬ ನೂರಾರು ಪ್ರಶ್ನೆಗಳು ಹುಟ್ಟಿದ್ದೂ ಹೌದು...
ಬಾಲಿವುಡ್ ನಟ ಶಾಹೀದ್ ಕಪೂರ್
ಬಾಲಿವುಡ್ ನಟ ಶಾಹೀದ್ ಕಪೂರ್

ಉಡ್ತಾ ಪಂಜಾಬ್' ಚಿತ್ರದಲ್ಲಿ ನಟಿಸುತ್ತಿರುವ ಶಾಹೀದ್ ಕಪೂರ್ ಮತ್ತು ಅವನ ಒಂದು ಕಾಲದ ಗೆಳತಿ ಕರೀನಾ ಕಪೂರ್ ಅಮೃತಸರದಲ್ಲಿ ಒಂದೇ ಹೋಟೆಲ್‍ನಲ್ಲಿ ಉಳಿದುಕೊಳ್ತಾರೆ ಎಂಬ
ಸುದ್ದಿ ಇತ್ತು. ಹೌದಾ? ಏಕೆ? ಏನು? ಎಂಬ ನೂರಾರು ಪ್ರಶ್ನೆಗಳು ಹುಟ್ಟಿದ್ದೂ ಹೌದು. ಆದರದು ಇನ್ನ್ಯಾವ ಗಾಸಿಪ್‍ಗೂ ಎಡೆ ಮಾಡಿ ಕೊಡ್ಲಿಲ್ಲ.

ಈಗ ಮತ್ತೊಂದು ವಿಷಯ ಏನಪ್ಪಾ ಅಂದ್ರೆ, ಜೂ.10ಕ್ಕೆ ಶಾಹೀದ್ ಮೀರಾ ರಾಜ್‍ಪೂತ್‍ಗೆ ಮೂರು ಗಂಟು ಹಾಕೋಕೆ ಮುಹೂರ್ತ ನಿಗದಿಯಾಗಿದೆಯಂತೆ. ಹತ್ತಿರದ ಸಂಬಂಧಿಯೊಬ್ಬರ ಪ್ರಕಾರ ಅದೇ ಮಹೂರ್ತದಲ್ಲಿಯೇ ಶಾಹೀದ್ ಗೃಹಸ್ಥಾಶ್ರಮಕ್ಕೆ ಕಾಲಿಡೋದು ಗ್ಯಾರಂಟಿ.

ಇನ್ನೂ ಒಳ್ಳೆ ದಿನ ಇದೆಯಾ ಎಂದೂ ನೋಡಲಾಗುತ್ತಿದೆಯಂತೆ. ಹಾಗಂತ ವರನಾಗಲಿ, ವಧುವಾಗಲಿ ಈ ವಿಷಯದ ಬಗ್ಗೆ ಬಾಯಿ ಬಿಟ್ಟಿಲ್ಲ. ಮದುವೆ ತಯಾರಿ ನಡೀತಿದೆ ಎಂಬುದನ್ನು ಶಾಹೀದ್ ಸಹ ಒಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com