ಆಲಿಯಾ ಭಟ್ ನ್ಯೂಸ್‍ಪೇಪರ್‍ನಲ್ಲಿ ಓದ್ತಾಳೆ, `ಪೊಲೀಸರು 80 ಕೆಜಿ ಗಾತ್ರದ ಹೀರೋಯಿನ್ನನ್ನು ಸೆರೆಹಿಡಿದ್ದಾರೆ'. ನಂತರ ಆಲಿಯಾ ಉದ್ಗಾರ ತೆಗೀತಾಳೆ, `ಶಿಟ್ ಯಾರ್... ಈ ಸೋನಾಕ್ಷಿಗೆ ಏನಾಗಿದೆ?' ಎನ್ನುತ್ತಾಳೆ- ಹೀಗಂತ ಟ್ವೀಟ್ ಹಾಕ್ಕೊಂಡಿದ್ದು ರಿಷಿ ಕಪೂರ್.
ಕೆಲ ತಿಂಗಳ ಹಿಂದೆ. ಕೊನೆಗೆ ತಪ್ಪಾಯ್ತೆಂದು ಸೋನಾಕ್ಷಿ ಬಳಿ ಸಾರಿ ಕೂಡ ಕೇಳಿದ್ದರು ರಿಷಿ ಕಪೂರ್. ಈಗ ಇದೇ ರೀತಿ `ದಪ್ಪ ನಟಿ' ಎಂಬ ಟೀಕೆಗೆ ಗುರಿಯಾಗಿರುವುದು ವಿದ್ಯಾ ಬಾಲನ್! ಆದರೆ, ಹೀಗೆ ಟೀಕಿಸಿದ್ದು ಯಾರು ಅಂತ ವಿದ್ಯಾ ಬಾಯಿ ಬಿಟ್ಟಿಲ್ಲ.
ಎರಡು ದಿನದ ಹಿಂದೆ ವಿದ್ಯಾ ಬಾಲನ್ ಳನ್ನು ಒಂದು ಜೋಡಿ ಭೇಟಿ ಆಯಿತಂತೆ. ಅವರು ನೋಡಿದ ಕೂಡಲೇ `ಏನು ತುಂಬಾ ದಪ್ಪಗಾಗಿದ್ದೀಯಾ?' ಎಂದು ಈಕೆಯನ್ನು ಕೇಳಿದ್ದಾರೆ. `ಹಾರ್ಮೋನಲ್ ಪ್ರಾಬ್ಲಂ ನಿಮಗೂ ಇದೆಯಲ್ಲ. ನೀವೂ ದಪ್ಪಗಿದ್ದೀರಲ್ಲ?' ಎಂದು ಶಾರ್ಪ್ ಆಗಿ ಪ್ರತಿಕ್ರಿಯಿಸಿದ್ದಾಳೆ ವಿದ್ಯಾ. `ನಮ್ಮ ಗಾತ್ರ ಕಟ್ಟಿಕೊಂಡು ಇವರಿಗೆಲ್ಲ ಏನಾಗ್ಬೇಕಾಗಿದೆ.
ಸಹಜವಾಗಿ ಬೆಳೆದಿರುತ್ತೇವೆ' ಎಂದು ವಿದ್ಯಾ ಬಾಲನ್ ಬೇಸರ ಸೂಚಿಸಿದ್ದಾರೆ. ಕನ್ನಡದಲ್ಲೂ ಒಬ್ಬ ನಟಿ ಹೀಗೆ ದಪ್ಪದ ಟೀಕೆಗೆ ಗುರಿಯಾಗಿ, ರಿಯಾಲಿಟಿ ಶೋನಿಂದ ಹೊರಗೆ ಬಂದಿದ್ದು ಗೊತ್ತೇ ಇದೆ. ಹಾಗಾದ್ರೆ ದಪ್ಪಗಿರೋದು ತಪ್ಪಾ?