ನಿರ್ದೇಶನ ಮಾಡುವ ಇರಾದೆಯಿಲ್ಲ: ಅಕ್ಷಯ್ ಕುಮಾರ್

ಎರಡು ದಶಕಗಳಿಂದ ಮನರಂಜನಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು ನಿರ್ದೇಶನಕ್ಕಿಳಿಯುವ ಯಾವುದೇ
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್

ಮುಂಬೈ: ಎರಡು ದಶಕಗಳಿಂದ ಮನರಂಜನಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರು ನಿರ್ದೇಶನಕ್ಕಿಳಿಯುವ ಯಾವುದೇ ಇರಾದೆ ಇಲ್ಲ ಎಂದಿದ್ದು, 'ನಟನೆ ಮತ್ತು ನಿರ್ಮಾಣ' ಕಾರ್ಯದಲ್ಲಿ ತೃಪ್ತನಾಗಿದ್ದೇನೆ ಎಂದಿದ್ದಾರೆ.

ಅವರ ಹೊಸ ಚಲನಚಿತ್ರ 'ಸಿಂಗ್ ಇಸ್ ಬ್ಲಿಂಗ್'ನ ಪ್ರಚಾರಕ್ಕಾಕಿ ಟ್ವಿಟ್ಟರಾಟಿಯ ಜೊತೆ ನಡೆಸುತ್ತಿದ್ದ ಚ್ಯಾಟ್ ನಲ್ಲಿ ಅಭಿಮಾನಿಯೊಬ್ಬರು "ನೀವು ಸಿನೆಮಾ ನಿರ್ದೇಶಿಸುತ್ತೀರಿಯೇ" ಎಂಬ ಪ್ರಶ್ನೆಗೆ "ಇಲ್ಲ, ನನಗೆ ನಟನೆಯಲ್ಲಿ ಮತ್ತು ಸಿನೆಮಾ ನಿರ್ಮಾಣದಲ್ಲಿ ಖುಷಿಯಿದೆ" ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟ, ನೃತ್ಯಗಾರ ಪ್ರಭುದೇವ ನಿರ್ದೇಶನದ 'ಸಿಂಗ್ ಇಸ್ ಬ್ಲಿಂಗ್' ೨೦೧೫ರಲ್ಲಿ ಅಕ್ಷಯ್ ಅವರಿಗೆ ನಾಲ್ಕನೇ ಸಿನೆಮಾ. ಈ ವರ್ಷದಲ್ಲಿ ಅವರು ನಟಿಸಿರುವ ಇತರ ಸಿನೆಮಾಗಳು 'ಬೇಬಿ', 'ಗಬ್ಬರ್ ಇಸ್ ಬ್ಯಾಕ್' ಮತ್ತು 'ಬ್ರದರ್ಸ್'.

ಶುಕ್ರವಾರ ತೆರೆ ಕಂಡ 'ಸಿಂಗ್ ಇಸ್ ಬ್ಲಿಂಗ್'ನಲ್ಲಿ ಅಮಿ ಜ್ಯಾಕ್ಸನ್, ಕೆ ಕೆ ಮೆನನ್ ಮತ್ತು ಲಾರಾ ದತ್ತ ಕೂಡ ನಟಿಸಿದ್ದಾರೆ. ೨೦೧೨ರ 'ರೌಡಿ ರಾಥೋರ್' ನಂತರ ಪ್ರಭುದೇವ ಅವರೊಂದಿಗೆ ಅಕ್ಷಯ್ ಗೆ ಇದು ಎರಡನೆ ಸಿನೆಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com