ಸುಂದರವಾಗಿ ಕಾಣಲು ತ್ವಚೆ ಬೆಳ್ಳಗಿರಬೇಕೆಂದೇನಿಲ್ಲ: ನವಾಜುದ್ದೀನ್ ಸಿದ್ದಿಖಿ

ತ್ವಚೆ ಬೆಳ್ಳಗಿದ್ದರೆ ಮಾತ್ರ ಸೌಂದರ್ಯ ಅಲ್ಲ, ಬೆಳ್ಳಗಿರುವುದಕ್ಕೂ ಸೌಂದರ್ಯಕ್ಕೂ ವ್ಯತ್ಯಾಸವಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ...
ನವಾಜುದ್ದೀನ್ ಸಿದ್ಧಿಖಿ
ನವಾಜುದ್ದೀನ್ ಸಿದ್ಧಿಖಿ
ಮುಂಬೈ: ತ್ವಚೆ ಬೆಳ್ಳಗಿದ್ದರೆ ಮಾತ್ರ ಸೌಂದರ್ಯ ಅಲ್ಲ, ಬೆಳ್ಳಗಿರುವುದಕ್ಕೂ ಸೌಂದರ್ಯಕ್ಕೂ ವ್ಯತ್ಯಾಸವಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಹೇಳಿದ್ದಾರೆ.
ಬಾಲಿವುಡ್ ನಟಿಯರಾದ ಕಂಗನಾ ರಣಾವತ್, ಅನುಷ್ಕಾ ಶರ್ಮಾ ಮತ್ತು ರಿಚಾ ಚಡ್ಡಾ ಮೊದಲಾದವರು ಫೇರ್‌ನೆಸ್ ಕ್ರೀಂನ ಜಾಹೀರಾತುಗೆ ರೂಪದರ್ಶಿಯಾಗಲು ಒಲ್ಲೆ ಎಂದಿದ್ದರು. ಹೀಗೆ ಫೇರ್‌ನೆಸ್ ಕ್ರೀಂನ ಜಾಹೀರಾತಿಗೆ ಒಲ್ಲೆ ಎಂದವರ ಪಟ್ಟಿಯಲ್ಲಿ ನವಾಜುದ್ದೀನ್ ಸಿದ್ಧಿಖಿ ಕೂಡಾ ಇದ್ದಾರೆ.
ಫೇರ್‌ನೆಸ್ ಕ್ರೀಂ ಜಾಹೀರಾತಿಗೆ ರೂಪದರ್ಶಿಯಾಗುತ್ತೀರಾ? ಎಂದು ಮಾಧ್ಯಮದವರು ಕೇಳಿದಾಗ, ಇಲ್ಲ, ಸುಂದರವಾಗಿ ಕಾಣಲು ನಿಮಗೆ ಯಾವುದೇ ಉತ್ಪನ್ನದ ಅಗತ್ಯವಿಲ್ಲ. ಕೆಲವೊಬ್ಬರಿಗೆ ಸೌಂದರ್ಯಕ್ಕೆ ಮಾನದಂಡಗಳಿರುತ್ತವೆ. ಅಂಥಾ ಜನರಿಗೆ ಆ ಒಂದು ಬಣ್ಣವಿದ್ದರೆ ಮಾತ್ರ ಚೆಂದ ಎಂದು ಉತ್ತರಿಸಿದ್ದಾರೆ.
ಸೌಂದರ್ಯ ಎಂಬುದು ವೈಯಕ್ತಿಕ. ನೀನು ಬೆಳ್ಳಗಿದ್ದರೆ ಮಾತ್ರ ಸೌಂದರ್ಯ ಎಂದು ಯಾರಿಗೂ ಹೇಳುವಂತಿಲ್ಲ. ಈ ರೀತಿಯ ಯೋಚನೆಗಳೆಲ್ಲಾ ನಾವು ಪಾಶ್ಚಾತ್ಯರಿಂದ ಕಡ ತಂದಿದ್ದು ಎಂದು 42ರ ಹರೆಯದ ಸಿದ್ದಿಖಿ ಹೇಳಿದ್ದಾರೆ.
ನಿಮ್ಮ ಪ್ರಕಾರ ಫ್ಯಾಷನ್ ಎಂದರೆ? 
ನಿಮ್ಮ ದೇಹಕ್ಕೆ ಹಿತವಾಗುವಂತೆ, ನೀವು ಚೆನ್ನಾಗಿ ಕಾಣಿಸಿಕೊಳ್ಳುವುದು. ನಿರ್ದಿಷ್ಟ ಗುಂಪೊಂದರ ಸಲಹೆಯ ಮೇರೆಗೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವುದಲ್ಲ ಎಂದು ಸಿದ್ದಿಖಿ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com