ಸಲ್ಮಾನ್ ಖಾನ್ ನಿಶ್ಚಿತಾರ್ಥ ಆಗಿಲ್ಲ: ಅರ್ಪಿತಾ ಖಾನ್ ಸ್ಪಷ್ಟನೆ

ರೋಮನ್ ಮೂಲದ ನಟಿ ಲುಲಿಯಾ ವಂತುರ್ ಜೊತೆ ಸಲ್ಮಾನ್ ಖಾನ್ ನಿಶ್ಚಿತಾರ್ಥ ನಡೆದಿಲ್ಲ ಎಂದು ಸಲ್ಲು ತಂಗಿ ಅರ್ಪಿತಾ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಅರ್ಪಿತಾ ಖಾನ್
ಅರ್ಪಿತಾ ಖಾನ್

ರೋಮನ್ ಮೂಲದ ನಟಿ ಲುಲಿಯಾ ವಂತುರ್ ಜೊತೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್  ನಿಶ್ಚಿತಾರ್ಥ ನಡೆದಿಲ್ಲ ಎಂದು ಸಲ್ಲು ತಂಗಿ ಅರ್ಪಿತಾ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಸಲ್ಮಾನ್ ಖಾನ್ ಎಂಗೇಜ್ ಮೆಂಟ್ ಕುರಿತಾಗಿ ಎದ್ದಿರುವ ಊಹಾಪೋಹಾಗಳಿಗೆ ಅರ್ಪಿತಾ ಉತ್ತರ ನೀಡಿದ್ದಾರೆ. ಮಾಧ್ಯಮ ಹಾಗೂ ವೆಬ್ ಸೈಟ್, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಎಲ್ಲಾ ವಿಚಾರಗಳನ್ನು ನೀವು ನಂಬಬೇಡಿ. ಯಾಕೆ ಈ ರೀತಿ ವರದಿ ಯಾಕೆ ಮಾಡುತ್ತಾರೋ ಅಂತಾ ಅರ್ಪಿತಾ ಖಾನ್ ಕಿಡಿಕಾರಿದ್ದಾರೆ.ಆ ಮೂಲಕ ಸಲ್ಲು ಮದುವೆ ಬಗ್ಗೆ ಎದ್ದಿದ್ದ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದವು. ಆದ್ರೀಗ ಈ ಸುದ್ದಿಗೆ ಸ್ವತಃ ಸಲ್ಲು ತಂಗಿ ಅರ್ಪಿತಾ ಖಾನ್ ಬ್ರೇಕ್ ಹಾಕಿದ್ದಾರೆ.

ಸಲ್ಮಾನ್ ಖಾನ್ ಮತ್ತು ಲುಲಿಯಾ  ರಹಸ್ಯವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com