ಪ್ರೀತಿಯ ಹಿಂದೆಬಿದ್ದ ಡೇವಿಡ್ ಮಿಲ್ಲರ್?

ಸೌತ್ ಆಫ್ರಿಕಾದ ಸ್ಟಾರ್ ಕ್ರಿಕೆಟರ್ ಡೇವಿಡ್ ಮಿಲ್ಲರ್, ಪ್ರೀತಿ ಜಿಂಟಾಳ ಹಿಂದೆ ಬಿದ್ದಿದ್ದಾನಾ? ಪ್ರೀತಿ ಜಿಂಟಾ- ಮಿಲ್ಲರ್ ಒಟ್ಟಿಗೆ...
ಡೇವಿಡ್ ಮಿಲ್ಲರ್ - ಪ್ರೀತಿ ಜಿಂಟಾ
ಡೇವಿಡ್ ಮಿಲ್ಲರ್ - ಪ್ರೀತಿ ಜಿಂಟಾ

ಸೌತ್ ಆಫ್ರಿಕಾದ ಸ್ಟಾರ್ ಕ್ರಿಕೆಟರ್ ಡೇವಿಡ್ ಮಿಲ್ಲರ್, ಪ್ರೀತಿ ಜಿಂಟಾಳ ಹಿಂದೆ ಬಿದ್ದಿದ್ದಾನಾ? ಪ್ರೀತಿ ಜಿಂಟಾ- ಮಿಲ್ಲರ್ ಒಟ್ಟಿಗೆ ಇರುವ ಫೋಟೋಗಳು ಈಗೆಲ್ಲೆಡೆ ಹರಿದಾಡ್ತಿವೆ.

ರೆಸ್ಟೋರೆಂಟ್‍ನಲ್ಲಿ ಇಬ್ಬರೂ ಒಟ್ಟಿಗೆ ಊಟ ಮಾಡಿ ಹೊರಬರುತ್ತಿರುವುದು, ಒಟ್ಟಿಗೆ ಕಾರು ಹತ್ತಿ ಹೊರಟಿರುವ ಚಿತ್ರಗಳು ಪ್ರೇಮ ಸಂಬಂಧದ ಅನುಮಾನ ಹುಟ್ಟುಹಾಕಿವೆ. ದಕ್ಷಿಣ ಆಫ್ರಿಕಾ ತಂಡ ಈಗ ಭಾರತದ ಪ್ರವಾಸದಲ್ಲಿದ್ದು, ರಾಜ್ ಕೋಟ್ ಪಂದ್ಯ ಮುಗಿದ ಬಳಿಕ ಮಿಲ್ಲರ್, ಪ್ರೀತಿಯನ್ನು ಭೇಟಿ ಮಾಡಿದ್ದಾನಂತೆ. 
ಜಿಂಟಾ ಒಡೆತನದ ಪಂಜಾಬ್ ಟೀಮಿನಲ್ಲೂ ಡೇವಿಡ್ ಮಿಲ್ಲರ್ ಇದ್ದಾನೆ. ಮುಂದಿನ ಐಪಿಎಲ್‍ನಲ್ಲಿ ತಂಡದ ರೂಪುರೇಷೆ ಬಗ್ಗೆ ಚರ್ಚಿಸಲು ಇವರು ಭೇಟಿಯಾದರಾ? ಗೊತ್ತಿಲ್ಲ. ಆದರೆ, ನೆಸ್ ವಾಡಿಯಾನಿಂದ ದೂರವಾದ ಮೇಲೆ ಪ್ರೀತಿ ಸೂಕ್ತ ಬಾಯ್ ಫ್ರೆಂಡ್ ಅನ್ನು ಹುಡುಕುತ್ತಿರುವುದಂತೂ ನಿಜ. ಅದು ಡೇವಿಡ್ ಮಿಲ್ಲರ್ ಇರಬಹುದಾ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com