ಎಸ್ ಆರ್ ಕೆ 'ಫ್ಯಾನ್' ಮೊದಲ ಭಿತ್ತಿಚಿತ್ರ ಬಿಡುಗಡೆ

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ನಟನೆಯ 'ಫ್ಯಾನ್' ಚಲನಚಿತ್ರದ ಬಗ್ಗೆ ಜನರ ಕುತೂಹಲ ದಿನದಿಂದ ದಿನಕ್ಕೆ ಏರುತ್ತಿದ್ದು, ಈಗ ಯಶ್ ರಾಜ್ ಫಿಲ್ಮ್ ಸಿನೆಮಾದ
'ಫ್ಯಾನ್' ಚಲನಚಿತ್ರದ ಮೊದಲ ಭಿತ್ತಿಚಿತ್ರ
'ಫ್ಯಾನ್' ಚಲನಚಿತ್ರದ ಮೊದಲ ಭಿತ್ತಿಚಿತ್ರ
Updated on

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ನಟನೆಯ 'ಫ್ಯಾನ್' ಚಲನಚಿತ್ರದ ಬಗ್ಗೆ ಜನರ ಕುತೂಹಲ ದಿನದಿಂದ ದಿನಕ್ಕೆ ಏರುತ್ತಿದ್ದು, ಈಗ ಯಶ್ ರಾಜ್ ಫಿಲ್ಮ್ ಸಿನೆಮಾದ ಮೊದಲ ಭಿತ್ತಿಚಿತ್ರ ಬಿಡುಗಡೆ ಮಾಡಿದೆ.

ಈ ಮೊದಲ ಭಿತ್ತಿ ಚಿತ್ರದಲ್ಲಿ ೪೯ ವರ್ಷದ ನಟ ಅಕಾ ಗೌರವ್, ಸೂಪರ್ ಸ್ಟಾರ್ ನ ದೊಡ್ಡ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.

ಆದರೆ ಗೌರವ್ ಅವರ ಮುಖವನ್ನು ತೋರಿಸಿಲ್ಲ ಬದಲಾಗಿ ತನ್ನ ಆರಾಧ್ಯದೈವನ ಚಿತ್ರಗಳನ್ನು ರೂಮಿನಲ್ಲಿ ನೇತುಹಾಕಿ ನೋಡುತ್ತಿರುವ ದೃಶ್ಯ ಇದೆ.

ಯಶ್ ರಾಜ್ ಫಿಲ್ಮ್ ಟ್ವೀಟ್ ಮಾಡಿದ್ದು "ಸ್ಟಾರ್ ಇಲ್ಲದೆ ಅಭಿಮಾನಿಯಿಲ್ಲ, ಅಭಿಮಾನಿಯಿಲ್ಲದೆ ಸ್ಟಾರ್ ಇಲ್ಲ. ಇಲ್ಲಿದ್ದಾನೆ ಎಲ್ಲರಿಗೂ ದೊಡ್ಡ ಫ್ಯಾನ್ - ಗೌರವ್!"ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com