ಮನೋಜ್ ಬಾಜಪೇಯಿರ 'ಟ್ರಾಫಿಕ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ನಟ ಮನೋಜ್ ಬಾಜಪೇಯಿ ತಮ್ಮ ಟ್ರಾಫಿಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಟ್ರಾಫಿಕ್
ಟ್ರಾಫಿಕ್

ನವದೆಹಲಿ: ನಟ ಮನೋಜ್ ಬಾಜಪೇಯಿ ತಮ್ಮ ಟ್ರಾಫಿಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಹಿಂದಿಯ ಟ್ರಾಫಿಕ್ ಮಲಯಾಳಂ ಟ್ರಾಫಿಕ್ ಚಿತ್ರದ ರೀಮೆಕ್ ಆಗಿದ್ದು, ಮೂಲ ಚಿತ್ರವನ್ನು ರಾಜೇಶ್ ಪಿಳೈ ಅವರು ನಿರ್ದೇಶಿಸಿದ್ದರು. ಆದರೆ ಕಳೆದ ಫೆಬ್ರವರಿ 27ರಂದು ರಾಜೇಶ್ ಪಿಳೈ ಅವರು ನಿಧನರಾಗಿದ್ದು, ಅವರ ನೆನಪಿನಾರ್ಥ ಮನೋಜ್ ಬಾಜಪೇಯಿ ಅವರು ಟ್ರಾಫಿಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ಮನೋಜ್ ತಮ್ಮ ಟ್ವೀಟರ್ ನಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಹಿಟ್ ಟೂಕ್ 150 ಮಿನಿಟ್ಸ್ ಟು ಸೇವ್ ಎ ಲೈಫ್ ಅಂಡ್ ಕ್ರಿಯೆಟ್ ಹಿಸ್ಟರಿ ಎಂದು ಬರೆದಿದ್ದು, ಟ್ರಾಫಿಕ್ ಡ್ರಸ್ ನಲ್ಲಿ ಮನೋಜ್ ಮಿಂಚಿದ್ದಾರೆ. ಚಿತ್ರದ ಟ್ರೈಲರ್ ನಾಳೆ 3 ಗಂಟೆಗೆ ಬಿಡುಗಡೆಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com