ನಟ ದಿಲೀಪ್ ಕುಮಾರ್ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಜ್ವರ ಮತ್ತು ಶ್ವಾಸಕೋಶ ತೊಂದರೆಯಿಂದ ಕಳೆದ ಒಂದು ವಾರದಿಂದ ಮುಂಬಯಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಹಾಗೂ ದಾದಾ ಸಾಹೇಬ್ ...
ದಿಲೀಪ್ ಕುಮಾರ್
ದಿಲೀಪ್ ಕುಮಾರ್

ಮುಂಬೈ:  ಜ್ವರ ಮತ್ತು ಶ್ವಾಸಕೋಶ ತೊಂದರೆಯಿಂದ ಕಳೆದ  ಒಂದು ವಾರದಿಂದ ಮುಂಬಯಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಹಾಗೂ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ದಿಲೀಪ್ ಕುಮಾರ್ ಇಂದು  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ದಿಲೀಪ್ ಕುಮಾರ್ ಅವರು ಗುಣಮುಖರಾಗಿದ್ದು ಇಂದು ಬೆಳಗ್ಗೆ ಸುಮಾರು 11.55 ರ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ಬುಧವಾರವೇ ಮನೆಗೆ ತೆರಳಲು ವೈದ್ಯರು ಅನುಮತಿ ನೀಡಿದ್ದರೂ ದಿಲೀಪ್ ಕುಮಾರ್ ಪರಿವಾರ ಗುರುವಾರ ಬಿಡುಗಡೆಯಾಗಲು ನಿರ್ಧರಿಸಿತ್ತು.

ಇನ್ನು ದಿಲೀಪ್ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಮನೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ ಪತ್ನಿ ಹಾಗೂ ನಟಿ ಸಾಯಿರಾ ಬಾನು ಅವರು ಗುಣಮುಖವಾಗಲೆಂದು ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com