'ರಯೀಸ್' ಭಾಗವಾಗಿರುವುದಕ್ಕೆ ಹೆಮ್ಮೆಯಿದೆ: ಸನ್ನಿ ಲಿಯೋನ್

ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ರಯೀಸ್' ಸಿನೆಮಾದ ವಿಶೇಷ ಹಾಡು 'ಲೈಲಾ ಮೈ ಲೈಲಾ' ಹಾಡಿನಲ್ಲಿ ನಟಿ ಸನ್ನಿ ಲಿಯೋನ್ ನಟಿಸಿದ್ದು, ಈ ಹಾಡು ಸೋಮವಾರ
ನಟಿ ಸನ್ನಿ ಲಿಯೋನ್
ನಟಿ ಸನ್ನಿ ಲಿಯೋನ್
ಮುಂಬೈ: ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ರಯೀಸ್' ಸಿನೆಮಾದ ವಿಶೇಷ ಹಾಡು 'ಲೈಲಾ ಮೈ ಲೈಲಾ' ಹಾಡಿನಲ್ಲಿ ನಟಿ ಸನ್ನಿ ಲಿಯೋನ್ ನಟಿಸಿದ್ದು, ಈ ಹಾಡು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ರಾಹುಲ್ ಧೋಲಾಕಿಯ ನಿರ್ದೇಶನದ ಈ ಸಿನೆಮಾದಲ್ಲಿ ನಟಿಸಿರುವುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ ನಟಿ. 
"'ಲೈಲಾ ಮೈ ಲೈಲಾ' ಹಾಡಿನ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ. 'ರಯೀಸ್' ಪ್ರಯಾಣ ಪ್ರಾರಂಭವಾಗಿದೆ. ನಾನು ಬರುತ್ತಿದ್ದೇನೆ" ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ. 
೧೯೮೦ ರ ಸಿನೆಮಾ 'ಖುರ್ಬಾನಿ'ಯ ಹಾಡು 'ಲೈಲಾ ಹೊ ಲೈಲಾ'ದ ಮತ್ತೊಂದು ಅವತಾರ 'ಲೈಲಾ ಮೈ ಲೈಲಾ' ಹಾಡು. 
"ರಾಮ್ ಸಂಪತ್ ನಿಜಕ್ಕೂ ಅದ್ಭುತ. ಅಷ್ಟೇ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಸನ್ನಿ ಲಿಯೋನ್ ಮತ್ತು ಗತವೈಭವವನ್ನು ಮರಳಿಸಿದ್ದಾರೆ" ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ. 
ಈ ಸಿನೆಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಬಾಲಿವುಡ್ ನಟಿ ಮಹಿರಾ ಖಾನ್ ಕೂಡ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com