ಪಾಕಿಸ್ತಾನದಲ್ಲಿ 'ಫ್ರೀಕಿ ಅಲಿ' ಬಿಡುಗಡೆಯಾಗಿರುವುದು ಸಂತಸವಾಗಿದೆ: ನವಾಜುದ್ದೀನ್ ಸಿದ್ಧಿಕಿ

ಪಾಕಿಸ್ತಾನದಲ್ಲಿ ಫ್ರೀಕಿ ಅಲಿ ಸಿನಿಮಾ ಬಿಡುಗಡೆಯಾಗಿರುವುತು ತುಂಬಾ ಸಂತೋಷ ತಂದಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹರ್ಷ ವ್ಯಕ್ತ ...
ನವಾಜುದ್ದೀನ್ ಸಿದ್ಧಿಕಿ
ನವಾಜುದ್ದೀನ್ ಸಿದ್ಧಿಕಿ

ಮುಂಬಯಿ: ಪಾಕಿಸ್ತಾನದಲ್ಲಿ ಫ್ರೀಕಿ ಅಲಿ ಸಿನಿಮಾ ಬಿಡುಗಡೆಯಾಗಿರುವುತು ತುಂಬಾ ಸಂತೋಷ ತಂದಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಉರಿ ಸೇನಾ ನೆಲೆಯ ಮೇಲೆ ಉಗ್ರರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಗಳ ನಡುವೆ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು.  ಇದಾದ ನಂತರ ಪಾಕಿಸ್ತಾನ ಸಿನಿಮಾ ಪ್ರದರ್ಶಕರು ಹಾಗೂ ಚಿತ್ರಮಂದಿರ ಮಾಲೀಕರು ಭಾರತೀಯ ಸಿನಿಮಾಗಳ ಬಿಡುಗಡೆಗೆ ನಿಷೇಧ ಹೇರಿದ್ದರು.

ಎರಡು ತಿಂಗಳ ನಂತರ ಪಾಕಿಸ್ತಾನ ಸಿನಿಮಾ ಪ್ರದರ್ಶಕರೂ ಭಾರತೀಯ ಚಿತ್ರಗಳಿಗೆ ಹೇರಿದ್ದ ನಿಷೇಧ ತೆರವುಗೊಳಿಸಿದ್ದಾರೆ. ನಿಷೇಧ ತೆರವಿನ ನಂತರ ಬಿಡುಗೆಯಾಗುತ್ತಿರುವ ಮೊದಲ ಭಾರತೀಯ ಸಿನಿಮಾ ಫ್ರೀಕಿ ಅಲಿ ಆಗಿದೆ.

ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿರುವ ಫ್ರೀಕಿ ಅಲಿಯಲ್ಲಿ ನವಾಜುದ್ದೀನ್ ಸಿದ್ಧಿಕಿ, ಅರ್ಬಾಜ್ ಖಾನ್, ಅಮಿ ಜಾಕ್ಸನ್ ನಟಿಸಿದ್ದಾರೆ. ಇನ್ನೂ ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆಯಾಗಿರುವುದು ಸಂತಸ ತಂದಿದೆ. ನಮ್ಮ ಸಿನಿಮಾದ ಕಲೆಕ್ಷನ್ ಕೂಡ ಹೆಚ್ಚಾಗಲಿದೆ ಎಂದು ನವಾಜುದ್ದೀನಿ ಸಿದ್ಧಿಕಿ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com