ಹರ್ಯಾಣದಲ್ಲಿ ಅಮೀರ್ ಖಾನ್ ನಟನೆಯ ದಂಗಲ್ ಗೆ ತೆರಿಗೆ ವಿನಾಯ್ತಿ!

ಕಳೆದ ವಾರ ಬಿಡುಗಡೆಯಾದ ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾಗೆ ಹರ್ಯಾಣ ಸರ್ಕಾರ ತೆರಿಗೆ ವಿನಾಯ್ತಿ ಘೋಷಣೆ ಮಾಡಿದೆ.
ದಂಗಲ್
ದಂಗಲ್
ಚಂಡೀಘರ್: ಕಳೆದ ವಾರ ಬಿಡುಗಡೆಯಾದ ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾಗೆ ಹರ್ಯಾಣ ಸರ್ಕಾರ ತೆರಿಗೆ ವಿನಾಯ್ತಿ ಘೋಷಣೆ ಮಾಡಿದೆ. 
ತಂದೆಯಿಂದಲೇ ತರಬೇತಿ ಪಡೆದ ಕುಸ್ತಿಪಟುಗಳಾದ ಇಬ್ಬರು ಸಹೋದರಿಯರ ಕತೆಯನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಹರ್ಯಾಣದ ನೈಜ ಘಟನೆಯಾಧಾರಿತ ಸಿನಿಮಾ ಆಗಿದ್ದು, ಹರ್ಯಾಣ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ. 
ಬಹದ್ದೂರ್ ಘರ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ " ದಂಗಲ್ ಸಿನಿಮಾ ಕುಸ್ತಿ ಹಾಗೂ ಭೇಟಿ ಬಚಾವೋ ಭೇಟಿ ಭೇಟಿ ಪಡಾಚೋ ಯೋಜನೆಯನ್ನು ಉತ್ತೇಜಿಸುತ್ತದೆ ಆದ್ದರಿಂದ ತೆರಿಕೆ ವಿನಾಯ್ತಿಯನ್ನು ಘೋಷಿಸುತ್ತೇವೆ ಎಂದು ಹೇಳಿದ್ದಾರೆ. 
ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ಖ್ಯಾತ ಕುಸ್ತಿಪಟು ಗೀತಾ ಹಾಗೂ ಬಬಿತಾ ಕುಮಾರಿ ಫೋಗಟ್ ಅವರ ತಂದೆ ಕುಸ್ತಿಪಟು ಮಹಾವೀರ್ ಫೋಗಟ್ ಅವರ ಜೀವನ ಚರಿತ್ರೆ ಆಧಾರಿತ ಚಿತ್ರ ದಂಗಲ್ ಡಿ.23 ರಂದು ಬಿಡುಗಡೆಯಾಗಿದ್ದು ಕೇವಲ 2 ದಿನಗಳಲ್ಲಿ 64 ಕೋಟಿ ರೂಪಾಯಿ ಹಣವನ್ನು ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com