ಶಾರೂಖ್ ಖಾನ್ ಗೆ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ್ದಳಂತೆ!

ಅಭೂತ ಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಗೆ ನಿಜ ಜೀವನದಲ್ಲಿ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ್ದರಂತೆ...
ಶಾರೂಖ್ ಖಾನ್
ಶಾರೂಖ್ ಖಾನ್
Updated on: 

ಮುಂಬಯಿ: ಕಿರುತೆರೆಯಿಂದ ಬಂದು ಬಾಲಿವುಡ್ ಹಿರಿತೆರೆಯಲ್ಲಿ ಅಭೂತ ಪೂರ್ವ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಗೆ ನಿಜ ಜೀವನದಲ್ಲಿ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ್ದರಂತೆ.

ತಮ್ಮ ಫ್ಯಾನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಾರೂಖ್ ಖಾನ್ ತಮಗೆ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿದ್ದನ್ನು ಈ ವೇಳೆ ನೆನಪು ಮಾಡಿಕೊಂಡರು.

ತಮ್ಮ ಭವಿಷ್ಯವನ್ನು ಅರಸುತ್ತಾ ಮೊಟ್ಟ ಮೊದಲ ಬಾರಿಗೆ ಮುಂಬಯಿಗೆ ರೈಲಿನಲ್ಲಿ ಬರುತ್ತಿದೆ. ರೈಲು ಮುಂಬಯಿ ತಲುಪಿದ ನಂತರ ಮತ್ತೆ ಸ್ಥಳೀಯ ಮಾರ್ಗಗಳಲ್ಲಿ ಸಂಚರಿಸುತ್ತೆ ಎಂದು ನನಗೆ ತಿಳಿದಿರಲಿಲ್ಲ.  ನಾನು ಕುಳಿತಿದ್ದ ಬರ್ತ್ ನಲ್ಲಿ ಬೇರೆಯವರು ಕುಳಿತು ಕೊಳ್ಳಲು ನಾನು ಅವಕಾಶ ನೀಡಲಿಲ್ಲ. ಇದು ನನ್ನ ಬರ್ತ್ ಎಂದು ಹೇಳಿದೆ.

ನನ್ನ ಬರ್ತ್ ನಲ್ಲಿ ನೀವು ಕುಳಿತುಕೊಳ್ಳಬಹುದು, ಆದರೆ ನಿಮ್ಮ ಜೊತೆಯಿರುವ ಪುರುಷ ಕುಳಿತುಕೊಳ್ಳಲು ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಕೂಡಲೇ ನನ್ನ ಕೆನ್ನೆಗೆ ಹೊಡೆದ ಮಹಿಳೆ. ಇದು ನಿನ್ನದಲ್ಲ. ಇದು ಎಲ್ಲರದ್ದು ಎಂದು ಹೇಳಿ ಕುಳಿತು ಕೊಂಡರು ಎಂದು ಶಾರೂಖ್ ಖಾನ್ ಅಂದಿನ ಘಟನೆಯ ಬಗ್ಗೆ ಮೆಲುಕು ಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com