

ಮುಂಬಯಿ: ಸಾನ್ ಸುಯಿ ಸ್ಟಾರ್ ಡಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟಿ ರೇಖಾರಿಂದ ಪ್ರಶಸ್ತಿ ಪಡೆದ ನಟಿ ಐಶ್ವರ್ಯಾ ರೈ ಬಚ್ಚನ್ ರೇಖಾ ಅವರನ್ನು ಅಮ್ಮ ಎಂದು ಸಂಬೋಧಿಸಿದ್ದಾರೆ.
ಐದು ವರ್ಷಗಳ ನಂತರ ಮತ್ತೆ ಬಾಲಿವುಡ್ ಗೆ ಎಂಟ್ರಿ ಪಡೆದಿರುವ ನಟಿ ಐಶ್ವರ್ಯಾ ರೈಗೆ ಸಂಜಯ್ ಗುಪ್ತಾ ನಿರ್ದೇಶನದ ಜಸ್ಬಾ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ನೀಡಲಾಯಿತು.
ಸ್ಟಾರ್ ಡಸ್ಟ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಐಶ್ವರ್ಯಾ ಥ್ಯಾಂಕ್ಯೂ ಮಾ ಎಂದು ರೇಖಾ ಅವರಿಗೆ ಹೇಳಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ನಟ ಅಮಿತಾಬ್ ಬಚ್ಚನ್ ರೇಖಾ ಮತ್ತು ತಮ್ಮ ಸೊಸೆ ಐಶ್ವರ್ಯಾ ರೈ ವೇದಿಕೆ ಹಂಚಿಕೊಂಡಿದ್ದನ್ನು ನೋಡಿ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು.
ಹಲವು ವರ್ಷಗಳ ಹಿಂದೆ ಅಮಿತಾಬ್ ಬಚ್ಚನ್ ಮತ್ತು ರೇಖಾ ನಡುವೆ ಪ್ರೇಮಾಂಕುರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.