ತಮ್ಮ ಕೆಲಸವನ್ನು ಸ್ವವಿಮರ್ಶೆಗೆ ಒಡ್ಡುವ ದೀಪಿಕಾ ಪಡುಕೋಣೆ

ತಪ್ಪ ತಪ್ಪುಗಳಿಂದ ಹೆಚ್ಚೆಚ್ಚು ಕಲಿಯುವುದಾಗಿಯೂ, ಕಟು ವಿಮರ್ಶೆ ಅವರ ಏಳಿಗೆಗೆ ಅವಶ್ಯಕ ಎಂದು ಇತ್ತೀಚಿಗೆ 'ಬಾಜಿರಾವ್ ಮಸ್ತಾನಿ' ಸಿನೆಮಾದಲ್ಲಿ ಕಾಣಿಕೊಂಡ ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ
Updated on

ಕರಾಚಿ: ತಪ್ಪ ತಪ್ಪುಗಳಿಂದ ಹೆಚ್ಚೆಚ್ಚು ಕಲಿಯುವುದಾಗಿಯೂ, ಕಟು ವಿಮರ್ಶೆ ಅವರ ಏಳಿಗೆಗೆ ಅವಶ್ಯಕ ಎಂದು ಇತ್ತೀಚಿಗೆ 'ಬಾಜಿರಾವ್ ಮಸ್ತಾನಿ' ಸಿನೆಮಾದಲ್ಲಿ ಕಾಣಿಕೊಂಡ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

ತಮ್ಮ ಕೆಲಸದ ಬಗ್ಗೆ ಸುಲಭವಾಗಿ ತೃಪ್ತಿ ಪಡುವುದಿಲ್ಲ ಅದನ್ನು ಸ್ವವಿಮರ್ಶೆಗೆ ಹೆಚ್ಚೆಚ್ಚು ಒಡ್ಡುತ್ತೇನೆ ಎಂದು ೩೦ ವರ್ಷದ ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಎಕ್ಸ್ಪ್ರೆಸ್ಸ್ ಟ್ರಿಬ್ಯೂನ್ ವರದಿ ಮಾಡಿದೆ.

"ನಾನು ನನ್ನ ಬಗ್ಗೆ ಕಠಿಣಳಾಗಿರುತ್ತೇನೆ. ನನ್ನ ಬಗ್ಗೆ ಬರುವ ವಿಮರ್ಶೆಗಳಿಂದ ಕಲಿಯಲು ಪ್ರಯತ್ನಿಸುತ್ತೇನೆ ಮತ್ತು ಅವುಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುತ್ತೇನೆ" ಎಂದು ಕೂಡ ದೀಪಿಕಾ ಹೇಳಿದ್ದಾರೆ.

ಎಲ್ಲವೂ ಕೊನೆಗೆ ತಮ್ಮ ಕೆಲಸವನ್ನು ಎಷ್ಟ ಇಷ್ಟ ಪಡುತ್ತೀರಿ ಎಂಬುದರ ಮೇಲೆ ನಿಂತಿದೆ ಮತ್ತು ಸಿನೆಮಾ ಸೆಟ್ ನಲ್ಲಿ ಇರುವುದು ನನ್ನ ಪ್ರೀತಿಯ ಕೆಲಸ ಎಂದಿದ್ದಾರೆ ದೀಪಿಕಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com