ಕಿಮ್ ಕರ್ದಾಶಿಯಾನ್ ನಂತರ ಇದೀಗ ಪ್ಯಾರಿಸ್‍ನಲ್ಲಿ ಮಲ್ಲಿಕಾ ಶೆರವಾತ್ ಮೇಲೆ ಹಲ್ಲೆ

ಪ್ಯಾರಿಸ್ ನಲ್ಲಿ ಬಾಲಿವುಡ್ ಮಾದಕ ನಟಿ ಮಲ್ಲಿಕಾ ಶೆರಾವತ್ ಮೇಲೆ ಆಗಂತುಕರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ...
ಮಲ್ಲಿಕಾ ಶೆರಾವತ್
ಮಲ್ಲಿಕಾ ಶೆರಾವತ್
ನವದೆಹಲಿ: ಪ್ಯಾರಿಸ್ ನಲ್ಲಿ ಬಾಲಿವುಡ್ ಮಾದಕ ನಟಿ ಮಲ್ಲಿಕಾ ಶೆರಾವತ್ ಮೇಲೆ ಆಗಂತುಕರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. 
ಪ್ಯಾರಿಸ್ ನಲ್ಲಿ ಮಲ್ಲಿಕಾ ಇದ್ದ ಅಪಾರ್ಟ್ಮೆಂಟ್ಗೆ ನೂಗ್ಗಿದ ಮುಖವಾಡ ಧರಿಸಿದ್ದ ಆಗಂತುಕರು ಅಶ್ರುವಾಯು ದಾಳಿ ನಡೆಸಿ ಥಳಿಸಿ ಹಲ್ಲೆಗೈದು ಪರಾರಿಯಾಗಿದ್ದಾರೆ. ಘಟನೆ ನವೆಂಬರ್ 12ರ ಶುಕ್ರವಾರ ನಡೆದಿದ್ದು ತಡವಾಗಿ ವರದಿಯಾಗಿದೆ. 
ರಾತ್ರಿ 9.30ರ ಸುಮಾರಿಗೆ ಫ್ರೆಂಚ್ ಬಾಯ್ ಫ್ರೆಂಡ್ ಜತೆ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದಾಗ ಆಗಂತುಕರ ದಿಢೀರ್ ಒಳ ನುಗ್ಗಿ ಹಲ್ಲೆ ನಡೆಸಿದ್ದಾರೆಂದು ಲೀ ಪ್ಯಾರೀಸಿಯನ್ ದೈನಿಕವನ್ನು ಉಲ್ಲೇಖಿಸಿ ಡೇಲಿ ಮೇಲ್ ವರದಿ ಮಾಡಿದೆ. 
ಮಲ್ಲಿಕಾ ಮೇಲೆ ಯಾಕೆ ಹಲ್ಲೆ ನಡೆದಿದೆ ಎಂಬ ಕಾರಣಗಳು ವರದಿಯಾಗಿಲ್ಲ. ಸದ್ಯ ಹಲ್ಲೆ ಬಗ್ಗೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com