ಟಿವಿ ಶೋಗಳಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ

ಟೆಲಿವಿಷನ್ ಇಂಡಸ್ಟ್ರಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತದ ಮೊದಲ ನಟಿ ಎಂಬ...
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Updated on
ಟೆಲಿವಿಷನ್ ಇಂಡಸ್ಟ್ರಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತದ ಮೊದಲ ನಟಿ ಎಂಬ ಮತ್ತೊಂದು ಹೆಗ್ಗಳಿಕೆಗೆ ಪ್ರಿಯಾಂಕಾ ಚೋಪ್ರಾ ಪಾತ್ರವಾಗಿದ್ದಾರೆ. ಈ ಮೂಲಕ ಅವರು ಫೋರ್ಬ್ಸ್ ಪಟ್ಟಿ ಸೇರಿದ್ದಾರೆ. 
ಅಮೆರಿಕಾದ ಟೆಲಿವಿಷನ್ ಶೋ ಕ್ವಾಂಟಿಕೋದಲ್ಲಿ ಭಾಗವಹಿಸಿದ ನಂತರ ಪ್ರಿಯಾಂಕಾ ಚೋಪ್ರಾ ಅವರ ಖ್ಯಾತಿ ಇನ್ನಷ್ಟು ಜಾಸ್ತಿಯಾಗಿದ್ದು, ಹಣ ಸಂಪಾದನೆ ಕೂಡ ದುಪ್ಪಟ್ಟುಗೊಂಡಿದೆ.
ಫೋರ್ಬ್ಸ್ ಪಟ್ಟಿಯಲ್ಲಿ ಪ್ರಿಯಾಂಕಾಗೆ 8ನೇ ಸ್ಥಾನವಿದ್ದು, ಅಮೆರಿಕಾದ ನಟಿ ಸೋಫಿಯಾ ವರ್ಗರ ಸತತ 5ನೇ ಬಾರಿಗೆ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
ವರ್ಗರ ಅವರ ಆದಾಯ 43 ದಶಲಕ್ಷ ಅಮೆರಿಕನ್ ಡಾಲರ್ ನಷ್ಟಾದರೆ ಪ್ರಿಯಾಂಕಾ 11 ದಶಲಕ್ಷ ಡಾಲರ್ ಸಂಪಾದಿಸಿದ್ದಾರೆ. ಕಳೆದ ವರ್ಷ ಎಬಿಸಿಯ ಕ್ವಾಂಟಿಕೋದಲ್ಲಿ ಅಭಿನಯಿಸಿದ್ದ ಪ್ರಿಯಾಂಕಾ ಚೋಪ್ರಾ, ಅದರ ಎರಡನೇ ಆವೃತ್ತಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
34 ವರ್ಷದ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ನಲ್ಲಿ ಕಳೆದ ವರ್ಷದಿಂದೀಚೆಗೆ ಬಾಜಿರಾವ್ ಮಸ್ತಾನಿ ಮತ್ತು ಜೈ ಗಂಗಾಜಲ್ ಚಿತ್ರಗಳಲ್ಲಿ ನಟಿಸಿದ್ದರೆ, ಹಾಲಿವುಡ್ ನ ಬೇವಾಚ್ ಚಿತ್ರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾದ ದ್ವಾಯ್ನೆ ಜಾನ್ಸನ್ ಜೊತೆ ನಟಿಸಿದ್ದಾರೆ. 
ಆದರೆ ಪ್ರಿಯಾಂಕಾಗೆ ಟಿ.ವಿ ಶೋವೊಂದರಿಂದಲೇ ಇಷ್ಟು ಹಣ ಸಂಪಾದನೆಯಾದದ್ದಲ್ಲ. ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಹಣ ಸಂಪಾದಿಸಿದ್ದಾರೆ ಎನ್ನುತ್ತದೆ ಫೋರ್ಬ್ಸ್ ಮ್ಯಾಗಜೀನ್.
ಬಿಗ್ ಬ್ಯಾಂಗ್ ಥಿಯರಿಯ ನಟಿ ಕಲೈ ಕ್ಯೂಕೊ 24.5 ದಶಲಕ್ಷ ಅಮೆರಿಕನ್ ಡಾಲರ್ ಸಂಪಾದನೆ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ. ಮಿಂಡಿ ಕಾಲಿಂಗ್ ಮೂರನೇ ಸ್ಥಾನ ಹೊಂದಿದ್ದಾರೆ.
ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಕೂಡ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಫೋರ್ಬ್ಸ್ ಪಟ್ಟಿಗೆ ಸೇರಿ ದೇಶಕ್ಕೆ ಗೌರವ ತಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com