ನೈರ್ಮಲ್ಯೀಕರಣ ರಾಯಭಾರಿ ವಿದ್ಯಾ ಬಾಲನ್ ಗೆ ಡೆಂಗ್ಯೂ

ಬಾಲಿವುಡ್ ನಟಿ ವಿದ್ಯಾ ಬಾಲನ್‌ಗೆ ಡೆಂಗ್ಯೂ ಇರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದು, ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ..
ವಿದ್ಯಾ ಬಾಲನ್
ವಿದ್ಯಾ ಬಾಲನ್
Updated on: 

ಮುಂಬೈ/ ನವದೆಹಲಿ: ಬಾಲಿವುಡ್ ನಟಿ ವಿದ್ಯಾ ಬಾಲನ್‌ಗೆ ಡೆಂಗ್ಯೂ ಇರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದು, ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಮುಂಬರುವ ಚಿತ್ರ ಕಹಾನಿ–2ನ ಚಿತ್ರೀಕರಣದಲ್ಲಿ ಪಾಲ್ಗೊಂಡು ಅಮೆರಿಕಾದಿಂದ ವಾಪಾಸದ ನಂತರ ವಿದ್ಯಾ ಕಾಯಿಲೆಗೆ ತುತ್ತಾಗಿದ್ದರು.

ಡೆಂಗಿ ಆಗಿರುವ ಬಗ್ಗೆ ಮಾಹಿತಿ ಬಂದ ಕೂಡಲೆ ಮುಂಬೈ ನಗರ ಪಾಲಿಕೆ ಅಧಿಕಾರಿಗಳು ವಿದ್ಯಾ ಬಾಲನ್‌ ಅವರ ಮನೆಗೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ವಿದ್ಯಾ ಅವರ ಮನೆಯ ಟೆರೇಸ್ ಮೇಲೆ ಡೆಂಗ್ಯೂ ಸೊಳ್ಳೆ ತನ್ನ ಸಂತಾನೋತ್ಪತ್ತಿ ಮಾಡಿದೆಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಸಿದ್ದಾರೆ.

ವಿದ್ಯಾ ಅವರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುತ್ತಿದ್ದು, ಸರ್ಕಾರದ ನೈರ್ಮಲ್ಯೀಕರಣ ಕಾರ್ಯಕ್ರಮಕ್ಕೆ ರಾಯಭಾರಿಯೂ ಆಗಿರುವ ವಿದ್ಯಾ ಬಾಲನ್‌ ಅವರ ಆರೋಗ್ಯದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ವಿಶೇಷ ಕಾಳಜಿವಹಿಸಿದ್ದು, ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.

ಇನ್ನೂ ದೆಹಲಿಯಲ್ಲಿ ಡೆಂಗ್ಯೂ ಪೀಡಿತರ ಹಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com