ಕ್ಯಾಮೆರಾಮನ್ ಮೇಲೆ ನಟ ಅರ್ಜುನ್ ರಾಂಪಾಲ್ ಹಲ್ಲೆ; ಆರೋಪ ತಿರಸ್ಕರಿಸಿದ ನಟ

ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು, ಖಾಸಗಿ ಹೊಟೆಲ್ ನಲ್ಲಿ ನಟ ಕ್ಯಾಮೆರಾಮನ್ ಒಬ್ಬರ ಮೇಲೆ ಕ್ಯಾಮೆರಾದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದು, ಖಾಸಗಿ ಹೊಟೆಲ್ ನಲ್ಲಿ ನಟ ಕ್ಯಾಮೆರಾಮನ್ ಒಬ್ಬರ ಮೇಲೆ ಕ್ಯಾಮೆರಾದಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನವದೆಹಲಿಯ ಶಾಂಗ್ರಿ ಲಾ ಹೊಟೇಲ್‌ನಲ್ಲಿ ಭಾನುವಾರ ಮುಂಜಾನೆ ಸುಮಾರು 3.30ರ ಸಂದರ್ಭದಲ್ಲಿ ನಡೆಯುತ್ತಿದ್ದ ಡಿಜೆ ಕಾರ್ಯಕ್ರಮದಲ್ಲಿ ನಟ ಅರ್ಜನ್ ರಾಂಪಾಲ್ ಸೇರಿದಂತೆ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ  ಅಲ್ಲಿ ನೆರಿದಿದ್ದ ಹಲವು ಕ್ಯಾಮೆರಾಮನ್ ಗಳು ನಟನ ಫೋಟೋ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಕ್ಯಾಮೆರಾದ ಫ್ಲಾಶ್ ಕಣ್ಣಿಗೆ ಬಿದ್ದಿದ್ದರಿಂದ ಆಕ್ರೋಶಗೊಂಡ ನಟ ಕ್ಯಾಮೆರಾ ಕಸಿದು ಬಿಸಾಡಿದ್ದಾರೆ. ಈ ವೇಳೆ ಕ್ಯಾಮೆರಾ ಶೋಭಿತ್  ಎಂಬುವವರ ತಲೆಗೆ ಬಿದ್ದಿದ್ದು ಅವರ ತಲೆಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.

ಹಲ್ಲೆಗೊಳಗಾದ ಶೋಭಿತ್ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪ ತಿರಸ್ಕರಿಸಿದ ನಟ ಅರ್ಜುನ್
ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ನಟ ಅರ್ಜುನ್ ರಾಂಪಾಲ್, ತಾವು ಯಾರ ಮೇಲೂ ಹಲ್ಲೆ ಮಾಡಿಲ್ಲ. ಸುಖಾಸುಮ್ಮನೆ ತಮ್ಮ ಮೇಲೆ ಆರೋಪ ಮಾಡಲಾಗುತ್ತಿದ್ದು, ಅಭಿಮಾನಿಯನ್ನು ಥಳಿಸಿದ್ದೇನೆ ಎಂಬ ಸುಳ್ಳು  ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದೂ ನಟ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com