ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ವಿಧಿವಶರಾಗಿದ್ದಾರೆ...
ಶಶಿ ಕಪೂರ್
ಶಶಿ ಕಪೂರ್
ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಶಶಿ ಕಪೂರ್ ವಿಧಿವಶರಾಗಿದ್ದಾರೆ. 
79 ವರ್ಷದ ಶಶಿ ಕಪೂರ್ ಅವರು ಕಳೆದ ಏಳು ತಿಂಗಳಿನಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ಸಂಜೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಶಿ ಕಪೂರ್ ಅವರು ಕುನಾಲ್ ಕಪೂರ್, ಸಂಜನಾ ಕಪೂರ್ ಮತ್ತು ಕರಣ್ ಕಪೂರ್ ಮಕ್ಕಳನ್ನು ಅಗಲಿದ್ದಾರೆ. 
ಶಶಿ ಕಪೂರ್ ಅವರಿಗೆ ಕೇಂದ್ರ ಸರ್ಕಾರ 2015ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನು 2011ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಶಶಿ ಕಪೂರ್ ಅವರು ಒಟ್ಟಾರೆ 61 ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ನಟನೆ ಜೊತೆಗೆ ನಿರ್ದೇಶಕ ಹಾಗೂ ಹಲವು ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com