ಖ್ಯಾತ ಟೆನಿಸ್ ತಾರೆ ಜೊಕೊವಿಚ್ ಜತೆ ದೀಪಿಕಾ ಪಡುಕೋಣೆ ಅಫೇರ್!

ವಿಶ್ವಶ್ರೇಷ್ಠ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಜತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಜೊಕೊವಿಚ್...
ನೊವಾಕ್ ಜೊಕೊವಿಚ್, ದೀಪಿಕಾ ಪಡುಕೋಣೆ
ನೊವಾಕ್ ಜೊಕೊವಿಚ್, ದೀಪಿಕಾ ಪಡುಕೋಣೆ
ನವದೆಹಲಿ: ವಿಶ್ವಶ್ರೇಷ್ಠ ಟೆನಿಸ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಜತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಜೊಕೊವಿಚ್ ಮಾಜಿ ಗೆಳತಿ ನತಾಶಾ ಬೆಕ್ಲಾವಕ್ ನೇರ ಆರೋಪ ಮಾಡಿದ್ದಾರೆ. 
2014ರಲ್ಲೇ ಜೊಕೊವಿಚ್ ಮತ್ತು ದೀಪಿಕಾ ನಡುವಿನ ಡೇಟಿಂಗ್ ವಿಷಯದ ಬಗ್ಗೆ ಗುಸು ಗುಸು ಇದ್ದರೂ ಇದೀಗ ನತಾಶಾ ಬೆಕ್ಲಾವಕ್ ಆರೋಪ ಮಾಡಿರುವುದು ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. 
ಸಂದರ್ಶನವೊಂದರಲ್ಲಿ ಮಾತನಾಡಿದ ನತಾಶಾ ತನ್ನ ಮತ್ತು ಜೊಕೊ ನಡುವಿನ ಸಂಬಂಧ ಕಡಿದ ನಂತರ ಜೊಕೊ ದೀಪಿಕಾ ಪಡುಕೋಣೆ ಜತೆಗೆ ಡೇಟಿಂಗ್ ನಡೆಸುತ್ತಿದ್ದರು. ಇದೇ ವೇಳೆ ಜೊಕೊ ತಮ್ಮ ಹಾಲಿ ಪತ್ನಿ ಜೆಲೆನಾ ರಿಸ್ಟಿಕ್ ಜತೆಯೂ ಸಂಬಂಧವಿಟ್ಟುಕೊಂಡಿದ್ದರು ಎಂದು ನತಾಶಾ ಆರೋಪಿಸಿದ್ದಾರೆ. 
ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಮಾಲಿಕತ್ವದ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ ನಲ್ಲಿ ಆಡಲು ಜೊಕೊ 2014ರಲ್ಲಿ ಭಾರತಕ್ಕೆ ಬಂದಿದ್ದರು. ಆಗ ಜೊಕೊವಿಚ್ ಮತ್ತು ದೀಪಿಕಾ ನಡುವೆ ಪರಿಚಯವಾಗಿತ್ತು. ನಂತರ 2016ರಲ್ಲಿ ದೀಪಿಕಾ ಹಾಲಿವುಡ್ ಚಿತ್ರ ಎಕ್ಸ್ ಎಕ್ಸ್ ಎಕ್ಸ್ ಚಿತ್ರದ ಶೂಟಿಂಗ್ಗಾಗಿ ಅಮೆರಿಕದಲ್ಲಿದ್ದರು. ಇದೇ ಸಂದರ್ಭದಲ್ಲಿ ಜೊಕೊ ಮತ್ತು ದೀಪಿಕಾ ರೆಸ್ಟೊರೆಂಟ್ ವೊಂದರಲ್ಲಿ ಡಿನ್ನರ್ ಪಾರ್ಟಿ ಮಾಡಿರುವುದು ಇಬ್ಬರು ಜತೆಯಾಗಿ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹೀಗಾಗಿ ಈ ಇಬ್ಬರ ನಡುವೆ ಡೇಟಿಂಗ್ ಇದೆ ಎನ್ನುವಂತಹ ಸುದ್ದಿಗಳಿಗೆ ರೆಕ್ಕೆ ಪುಕ್ಕ ಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com